ಮೋದಿ ಈಗಾಗಲೇ ಪ್ರಧಾನಿಯಾಗಿರುವಂತೆ ವರ್ತಿಸುತ್ತಿದ್ದಾರೆ: ಸೋನಿಯಾ

ಶುಕ್ರವಾರ, 2 ಮೇ 2014 (13:02 IST)
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ತಮ್ಮ ಮಾತಿನ ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೋದಿ ಈಗಾಗಲೇ ತಾವು ದೇಶದ ಪ್ರಧಾನಿಯಾಗಿ ಬಿಟ್ಟಿದ್ದೇನೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕುಹಕವಾಡಿದ್ದಾರೆ.
 
ಉತ್ತರಪ್ರದೇಶದ ಫೈಜಾಬಾದ್‌ನಲ್ಲಿ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು '' ಚುನಾವಣೆಯ ಫಲಿತಾಂಶಗಳು ಈಗಾಗಲೇ ಪ್ರಕಟವಾಗಿರುವಂತೆ, ತಾವು ಪ್ರಧಾನಿ ಗದ್ದಿಗೆಯ ಮೇಲೆ ಕುಳಿತಾಗಿದೆ ಎಂಬಂತೆ ಮೋದಿ ವರ್ತಿಸುತ್ತಿದ್ದಾರೆ. ಚುನಾವಣಾ ಸ್ಪರ್ಧಿಗಳ ಅದೃಷ್ಟವನ್ನು ಜನರು ನಿರ್ಧರಿಸಲಿದ್ದಾರೆಯೇ ಹೊರತು ತಾವಲ್ಲ ಎಂಬುದು ಅವರಿಗೆ ಮರೆತು ಹೋಗಿದೆ ಎಂದು ಟೀಕಿಸಿದ್ದಾರೆ. 
 
ಕಳೆದ ವಾರ ಮತ ಚಲಾಯಿಸಿದ ನಂತರ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅಹಮದಾಬಾದ್ ಕ್ರೈ ಬ್ರೆಂಚ್ ಮೋದಿ ವಿರುದ್ಧ ಎರಡು ಕೇಸ್ ದಾಖಲಿಸಿದೆ. 
 
ಚುನಾವಣಾ ಪ್ರಚಾರ ಪ್ರಾರಂಭವಾದ ದಿನಗಳಿಂದ ಕಾಂಗ್ರೆಸ್ ನಾಯಕಿ ಮತ್ತು ಬಿಜೆಪಿ ನಾಯಕ ಕೆಸರೆರೆಚಾಟದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದಾರೆ. ಆದರೆ ಪರಸ್ಪರರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಅವರು ಮತಪ್ರಚಾರವನ್ನು ಕೈಗೊಂಡಿಲ್ಲ. 

ವೆಬ್ದುನಿಯಾವನ್ನು ಓದಿ