ಮೊದಿಯ ಫೋನ್‌ ಬರಬಹದು ಎಚ್ಚರದಿಂದಿರಿ

ಶುಕ್ರವಾರ, 25 ಜುಲೈ 2014 (18:51 IST)
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಚಿವಾಲಯದ ಕಾರ್ಯ ಕಲಾಪಗಳು ಬದಲಾಗಿವೆ. ತಡ ರಾತ್ರಿಯವರೆಗೂ ಕೂಡ ಸಚಿವರು ಚೇಂಬರ್‌‌ನಲ್ಲಿ ಇರಬೇಕಾಗುತ್ತಿದೆ. ರಾತ್ರಿ 8 ಗಂಟೆಯಾದರೆ ಸಾಕು ಪ್ರತಿಯೊಬ್ಬರ ಕಣ್ಣು ದೂರವಾಣಿಯ ಮೇಲಿರುತ್ತದೆ. ಯಾವುದೇ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫೋನ್‌ ಬರುವ ಸಾಧ್ಯತೆ ಇರುತ್ತದೆ. ಏಕೆಂದರೆ ಮೋದಿ ಆಯಾ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌‌ ಅಥವಾ ನೀತಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ ಅಥವಾ ಸಲಹೆಗಳನ್ನು ನೀಡುತ್ತಾರೆ.
 
ಯಾವಾಗ ಯಾವ ಸಚಿವಾಲಯಕ್ಕೆ ಫೋನ್‌ ಬರುತ್ತದೆಯೋ ಯಾರಿಗೂ ಗೊತ್ತಾಗುವುದಿಲ್ಲ. ಪ್ರಧಾನಿ ಮೋದಿ ತಮ್ಮ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಯಾವ ವಿಷಯದ ಬಗ್ಗೆ ಯಾರೊಂದಿಗೆ ಚರ್ಚಿಸಬೇಕು ಎನ್ನುವ ಬಗ್ಗೆ ಅನಿರೀಕ್ಷಿತವಾಗಿ ನಿರ್ಧರಿಸುವುದರಿಂದ ಯಾವ ಸಚಿವಾಲಯಕ್ಕೂ ಪ್ರಧಾನಿ ದೂರವಾಣಿ ಕರೆಯ ಬಗ್ಗೆ ಮಾಹಿತಿಯಿರುವುದಿಲ್ಲ.
 
ಮೋದಿ ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ನಿರ್ವಹಿಸಿದ ಕಾರ್ಯಶೈಲಿಯ ಬಗ್ಗೆ ದೇಶದ ಜನತೆಗೆ ತೋರಿಸಿದ್ದಾರೆ. ಮೋದಿ, ದೇಶಧ ಪ್ರಧಾನಿಗಿಂತ ಕಂಪೆನಿಯ ಸಿಇಒ ರಂತೆ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬರುತ್ತಿದೆ. ಇದೀಗ ಸರ್ಕಾರ ಅಸ್ಥಿತ್ವಕ್ಕೆ ಬಂದು ಎರಡು ತಿಂಗಳುಗಳಾಗುತ್ತಿರುವುದರಿಂದ ಸರಕಾರಕ್ಕೆ ಹೊಸ ಇಮೇಜ್ ಸೃಷ್ಟಿಸುವ ಚಿಂತನೆಯಲ್ಲಿ ತೊಡಗಿದ್ದಾರೆ.
 
ತಡ ರಾತ್ರಿಯವರೆಗೆ ಕಾರ್ಯನಿರ್ವಹಿಸುವ ಮೋದಿ ದೆಹಲಿಯಲ್ಲಿದ್ದಲ್ಲಿ ಖಚಿತವಾಗಿ ಪ್ರತಿದಿನ ಸಂಜೆ ಏಳು ಗಂಟೆಗೆ ತಮ್ಮ ಪ್ರಿನ್ಸಿಪಲ್ ಸೆಕ್ರೆಟ್ರಿ ನೂಪೇಂದ್ರ ಮಿಶ್ರ ಜೊತೆಗೆ ಮೀಟಿಂಗ್ ನಡೆಸಿ ಸಚಿವಾಲಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ. 
 
ಇಂತಹ ಸಂದರ್ಭಗಳಲ್ಲಿ ಅವರು, ಒಂದು ಅಥವಾ ಎರಡು ಸಚಿವಾಲಯದೊಂದಿಗೆ ವಿವರವಾಗಿ ಮಾತುತೆ ನಡೆಸುವ ಕುರಿತಂತೆ ತಕ್ಷಣವೇ ನಿರ್ಧರಿಸುತ್ತಾರೆ. ತಾವು ಚರ್ಚಿಸುವ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ  ಸಚಿವರಿಗೆ ಕರೆ ಮಾಡಿ ಮತ್ತಷ್ಟು ವಿವರಣೆ ಪಡೆಯುತ್ತಾರೆ. 
 
ಪ್ರಧಾನಿ ಮೋದಿ, ಸಚಿವಾಲಯದ ಲ್ಯಾಂಡ್‌ಲೈನ್‌‌ಗೆ ಮಾತ್ರ ಕರೆ ಮಾಡುತ್ತಾರೆ. ರಾತ್ರಿ 11 ಗಂಟೆಯವರೆಗೆ ಕೂಡ ಪ್ರಧಾನಿ ಮೋದಿ ಸಚಿವರೊಂದಿಗೆ ಚರ್ಚಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. 
 
ಕಳೆದ ದಿನಗಳ ಹಿಂದೆ ಸಾರಿಗೆ ಸಚಿವಾಲಯದಲ್ಲಿ ನೆನೆಗುದಿಗೆ ಬಿದ್ದ 20 ಸಾವಿರ ಕೋಟಿ ರೂಪಾಯಿಗಳ ಯೋಜನೆ ಬಗ್ಗೆ ವಿವರವಾಗಿ ಚರ್ಚಿಸಿದ್ದರು. ಇದರಿಂದಾಗಿ ಕೇವಲ ಮೂರೇ ದಿನಗಳಲ್ಲಿ ಹಲವಾರು ಯೋಜನೆ‌ಗಳಿಗೆ ಹಸಿರು ನಿಶಾನೆ ದೊರೆಯಿತು. ಮೂಲಗಳ ಪ್ರಕಾರ, ಪ್ರತಿ ಸಚಿವಾಲಯಕ್ಕೆ ಸಂಬಂಧಿಸಿದಂತೆ ಮೋದಿ ಮಾತುಕತೆ ನಡೆಸುತ್ತಾರೆ. ವಿಶೇಷವಾಗಿ ಏಳು ಸಚಿವಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. 
 
ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ತಂಡವೊಂದು ರಚಿಸಿದ್ದು, ಸರಕಾರದ ನಿರ್ಧಾರಗಳು ಅಥವಾ ಸಚಿವಾಲಯಗಳಿಗೆ ನೀಡಿದ ನಿರ್ದೇಶನಗಳ ಜಾರಿಗೆ ಒತ್ತಡ ಹೇರುವುದು ತಂಡ ರಚನೆಯ ಉದ್ದೇಶವಾಗಿದೆ.   
 
ನೂಪೇಂದ್ರ ಮಿಶ್ರ ನೇತೃತ್ವದಲ್ಲಿ ಸಿದ್ದಗೊಂಡ ಈ ತಂಡ ಪ್ರತಿದಿನದ ಕಾರ್ಯವೈಖರಿಯ ವಿವರಗಳನ್ನು ಮೋದಿಯವರಿಗೆ ತಳುಹಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ