ಲಂಡನ್‌ನಲ್ಲೂ ಓಡಲಿದೆ ಮೋದಿ ಎಕ್ಸ್‌ಪ್ರೆಸ್ ಬಸ್

ಮಂಗಳವಾರ, 13 ಅಕ್ಟೋಬರ್ 2015 (14:25 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಿನ ತಿಂಗಳು ಲಂಡನ್‌ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯದವರು ನಗರದ ಪ್ರಮುಖ ಕೇಂದ್ರಗಳಿಗೆ ಭೇಟಿ ನೀಡುವಂತಾಗಲು ಮೋದಿ ಎಕ್ಸ್‌ಪ್ರೆಸ್ ಬಸ್‌ಗೆ ಚಾಲನೆ ನೀಡಿದ್ದಾರೆ.
ಮೋದಿ ಎಕ್ಸ್‌ಪ್ರೆಸ್ ಬಸ್ ರವಿವಾರದಂದು ಉದ್ಘಾಟಿಸಲಾಗಿದೆ. ಬಸ್‌ನಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ಇಲಿಂಗ್ ರೋಡ್, ಲಿಟ್ಲ್ ಇಂಡಿಯಾ ಎಂದೇ ಕರೆಯಲಾಗುವ ವೆಂಬ್ಲೆ, ನಂತರ ಟ್ರಾಫಾಲ್ಗರ್ ಸ್ಕ್ಯೈರ್‌ಗೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ. 
 
ಯುಕೆ ವೆಲ್‌ಕಮ್ಸ್ ಮೋದಿ ಆಯೋಜಕ ಸಮಿತಿಯ ಸದಸ್ಯೆಯಾದ ಮಯೂರಿ ಪರ್ಮಾರ್ ಮಾತನಾಡಿ, ಭಾರತದಲ್ಲಿ ಚಾಯಿ ಪೇ ಚರ್ಚಾದಂತೆ ಯುಕೆನಲ್ಲಿ ಬಸ್ ಪೇ ಚರ್ಚಾ ನಡೆಯಲಿದೆ ಎಂದು ತಿಳಿಸಿದ್ದಾರೆ.
 
ಕಾರ್ಯಕ್ರಮದಲ್ಲಿ ಭಾಗಿಯಾಗಲು ಸುಮಾರು 400 ಸಮುದಾಯಗಳ ಸಂಸ್ಥೆಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು ನವೆಂಬರ್ 13 ರಂದು ಒಲಿಂಪಿಕ್ ಮಾದರಿಯಲ್ಲಿ ವೆಂಬ್ಲೆ ಕ್ರೀಡಾಂಗಣದಲ್ಲಿ ಮೋದಿಯವರಿಗೆ ಅದ್ಧೂರಿ ಔತಣ ಕೂಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಸಾಂಪ್ರದಾಯಕವಾಗಿ ತೆಂಗಿನಕಾಯಿ ಒಡೆದು ಮೋದಿ ಎಕ್ಸ್‌ಪ್ರೆಸ್ ಬಸ್ ಉದ್ಘಾಟಿಸಿದ ಲಾರ್ಡ್ ಡೊಲರ್ ಪೊಪಟ್, ಯುಕೆ ಮತ್ತು ಭಾರತ ಒಳ್ಳೆಯ ಕಾರಣಕ್ಕಾಗಿ ಮತ್ತಷ್ಟು ಹತ್ತಿರವಾಗುತ್ತಿರುವುದಕ್ಕೆ ಬಸ್ ಉದ್ಘಾಟನೆಯೇ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ