ಕಪ್ಪುಹಣ ಮರಳಿ ತರುವ ಬಗ್ಗೆ ಮೋದಿ ಸರ್ಕಾರಕ್ಕೆ ಗಂಭೀರತೆಯಿಲ್ಲ: ಬಿಜೆಪಿ ಸಂಸದ

ಮಂಗಳವಾರ, 21 ಏಪ್ರಿಲ್ 2015 (18:19 IST)
ಕೇಂದ್ರದ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿಗೆ ಮತ್ತು ಪ್ರದಾನಮಂತ್ರಿ ಮೋದಿ ನೇತೃತ್ವದ ಸರಕಾರಕ್ಕೆವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ತರುವ ಬಗ್ಗೆ ಗಂಭೀರತೆಯಿಲ್ಲ ಎಂದು ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಹೇಳಿದ್ದಾರೆ.  

ನಾನು ಜರ್ಮನಿಗೆ ಹೋಗಿ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿದಾಗ, ಭಾರತವೇ ಕಪ್ಪು ಹಣ ಪಡೆಯುವ ಬಗ್ಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಕಪ್ಪು ಹಣ ನಿಯಂತ್ರಣಕ್ಕಾಗಿ ಸ್ವಯಂಚಾಲಿತ ಹಣಕಾಸು ಖಾತೆ ಮಾಹಿತಿಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸುವ ಬಗ್ಗೆ  ಹೇಳಿಕೆ ನೀಡಿದ ಮಾರನೇ ದಿನ ಜೇಠ್ಮಲಾನಿ ಹೇಳಿಕೆ ಹೊರಬಿದ್ದಿದೆ.

ಕಪ್ಪಹಣವಿರುವ ಬಗ್ಗೆ ದೇಶಿಯ ತನಿಖಾ ತಂಡಗಳು ಸಾಗರೋತ್ತರ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಿದಾಗ ಮಾತ್ರ ಬ್ಯಾಂಕ್‌ಗಳು ಕಪ್ಪು ಹಣದ ಬಗ್ಗೆ ಮಾಹಿತಿ ನೀಡುತ್ತವೆ. ತೆರಿಗೆ ವಂಚನೆ, ಭ್ರಷ್ಟಾಚಾರದ ಹಣದ ಬಗ್ಗೆ ವಿದೇಶಿ ಬ್ಯಾಂಕ್‌ಗಳನ್ನು ಸಂಪರ್ಕಿಸಿದಾಗ ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣದ ಬಗ್ಗೆ ಸಂಪೂರ್ಣವಾಗಿ ನಿಖರ ಮಾಹಿತಿಯಿಲ್ಲ. ಆದರೆ, ಕೆಲ ಅಧಿಕಾರಿಗಳ ಮಾಹಿತಿ ಪ್ರಕಾರ 466 ಬಿಲಿಯನ್ ಡಾಲರ್‌ಗಳಿಂದ 1.14 ಟ್ರಿಲಿಯನ್ ಡಾಲರ್‌ಗಳಾಗಿವೆ ಎಂದು ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ