ಮೋದಿ ಸರಕಾರ ಪೊಳ್ಳು ಭರವಸೆಗಳನ್ನು ನೀಡುತ್ತಿದೆ:ಸೋನಿಯಾ ಗಾಂಧಿ

ಭಾನುವಾರ, 30 ಆಗಸ್ಟ್ 2015 (16:47 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಕೇವಲ ಪೊಳ್ಳು ಭಾಷಣಗಳನ್ನು ನೀಡುತ್ತಿದೆಯೇ ಹೊರತು ಜನಪರ ಕಾರ್ಯಗಳಿಗೆ ಚಾಲನೆ ನೀಡುತ್ತಿಲ್ಲ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 
 
ಜೆಡಿಯು, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದ ಸ್ವಾಭಿಮಾನ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರಕಾರ ತನ್ನ ಐದು ವರ್ಷಗಳ ಅವಧಿಯಲ್ಲಿ ಕಾಲು ಭಾಗ ಪೂರೈಸಿದೆ. ಆದಾಗ್ಯೂ ದೇಶದ ಜನತೆಗಾಗಿ ಯಾವುದೇ ಒಳ್ಳೆಯ ಕಾರ್ಯ ಮಾಡಿಲ್ಲ ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
 
ಒಂದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಘೋಷಿಸಿದ್ದ ಮೋದಿ ಸರಕಾರ ಭರವಸೆ ಈಡೇರಿಸಿಲ್ಲ. ಸರಕಾರಿ ಉದ್ಯೋಗಗಳಲ್ಲಿ ಕೂಡಾ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಎನ್‌ಎ ಹೇಳಿಕೆಗೆ ತಿರುಗೇಟು ನೀಡಿದ ಸೋನಿಯಾ, ಕೆಲವರು ಬಿಹಾರ್ ಜನತೆಯನ್ನು ಗೇಲಿ ಮಾಡುವ ಮೂಲಕ ಸಂತಸ ಪಡುತ್ತಾರೆ. ಯಾವುದೇ ಹೇಳಿಕೆ ನೀಡುವ ಸಂದರ್ಭ ಬಂದಾಗ ಡಿಎನ್‌ಎ ಮತ್ತು ಸಂಸ್ಕ್ರತಿಯ ಬಗ್ಗೆ ಮಾತನಾಡುವ ಸುವರ್ಣವಕಾಶ ಬಳಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
 
ಇದೊಂದು ರೈತ ವಿರೋಧಿ ಸರಕಾರ, ತಮ್ಮ ಶ್ರೀಮಂತ ಗೆಳೆಯರಿಗಾಗಿ ರೈತರ ಭೂಮಿಯನ್ನು ಕಸಿಯುವ ಸಂಚು ಮೋದಿ ಸರಕಾರ ರೂಪಿಸಿದೆ. ವಿಪಕ್ಷಗಳು ಸಂಸತ್ತಿನಲ್ಲಿ ಹೋರಾಟ ನಡೆಸಿದ್ದರಿಂದ ಸರಕಾರ ತೆಲೆಬಾಗಬೇಕಾಯಿತು ಎಂದರು
 
ವೇದಿಕೆಯಲ್ಲಿ ಬಿಹಾರ್ ಸಿಎಂ ನಿತೀಶ್ ಕುಮಾರ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಜೆಡಿಯು ಮುಖ್ಯಸ್ಥ ಶರದ್ ಯಾದವ್ ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ