ನನಗೆ ಹೆದರುತ್ತಿರುವ ಮೋದಿ ಸರ್ಕಾರ ಸದನದಲ್ಲಿ ಮಾತನಾಡಗೊಡುವುದಿಲ್ಲ: ರಾಹುಲ್ ಗಾಂಧಿ

ಬುಧವಾರ, 24 ಫೆಬ್ರವರಿ 2016 (15:29 IST)
ತನಗೆ ಹೆದರುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರಾಹುಲ್, ಸರ್ಕಾರ ತಾವು ಚರ್ಚೆಗೆ ಸಿದ್ಧ ಎಂದು ಹೇಳುತ್ತದೆ. ಆದರೆ ಅವರು ನನಗೆ ಸದನದಲ್ಲಿ ಮಾತನಾಡಲು ಬಿಡುವುದಿಲ್ಲ. ನಾನು ಸದನದಲ್ಲಿ ಮಾತನಾಡಲು ಸಿದ್ಧ, ಆದರೆ ಅವರದಕ್ಕೆ ಅವಕಾಶ ನೀಡುವುದಿಲ್ಲ. ನಾನೇನು ಮಾತನಾಡುತ್ತೇನೆ ಎಂಬ ಆತಂಕ , ಭಯ ಅವರನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ. 
 
ಏತನ್ಮಧ್ಯೆ, ಇಂದು ಅಧಿಕೃತವಾಗಿ ಆರಂಭವಾದ ಸಂಸತ್ ಅಧಿವೇಶನ ಮೂರು ಸಲ ಮುಂದೂಡಲ್ಪಟ್ಟಿತು. ಸದನ ಪ್ರಾರಂಭವಾಗುತ್ತಿದ್ದಂತೆ ಬಿಎಸ್‌ಪಿ ನಾಯಕಿ ಮಾಯಾವತಿ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಎತ್ತಿಕೊಂಡು ಉತ್ತರಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಲ್ಲಾ ವಿರೋಧ ಪಕ್ಷಗಳು ಇದೇ ವಿಷಯವನ್ನಿಟ್ಟುಕೊಂಡು ಕೋಲಾಹಲವನ್ನು ಪ್ರಾರಂಭಿಸಿದವು. 
 

ವೆಬ್ದುನಿಯಾವನ್ನು ಓದಿ