ಮೋದಿ ಸರ್ಕಾರದ ನೋಟಿಸಿನಿಂದ ಮನೆ ಖಾಲಿ ಮಾಡಿದ ಯುಪಿಎ ನಾಯಕರು

ಗುರುವಾರ, 31 ಜುಲೈ 2014 (19:32 IST)
ಯುಪಿಎ ಸರ್ಕಾರದಲ್ಲಿದ್ದ 16 ನಾಯಕರಿಗೆ ಸರ್ಕಾರಿ ಮನೆ ಖಾಲಿ ಮಾಡುವಂತೆ ಮೋದಿ ಸರಕಾರ ನೋಟಿಸು ಜಾರಿ ಮಾಡಿದೆ. ಸರ್ಕಾರಿ ಬಂಗಲೆಯಲ್ಲಿ ಅನಧಿಕೃತವಾಗಿದ್ದ ಮಂತ್ರಿಗಳ ಮೇಲೆ 20 ಲಕ್ಷ ರೂಪಾಯಿಗಿಂತ ಹೆಚ್ಚು ವಿಧಿಸಲಾದ ದಂಡ ಬಾಕಿ ಇದೆ ಎಂದು ಕೇಂದ್ರ ನಗರಾಭಿವೃದ್ದಿ ಸಚಿವ ಎಮ್‌‌‌. ವೆಂಕಯ್ಯಾ ನಾಯ್ಡು ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. 
 
ಸರ್ಕಾರಿ ಬಂಗಲೆ ಖಾಲಿ ಮಾಡದ ಮಂತ್ರಿಗಳೆಂದರೆ ಜಯಪಾಲ್‌ ರೆಡ್ಡಿ, ಅಜಿತ್‌ ಸಿಂಗ್‌, ಕಪಿಲ್ ಸಿಬಲ್‌, ಬೇನಿ ಪ್ರಸಾದ್, ಡಾ. ಗಿರಿಜಾ ವ್ಯಾಸ್‌, ಎಂ.ಎಂ. ಪಲ್ಲಂ ರಾಜು, ಕೃಷ್ಣಾ ತೀರ್ಥ, ಶ್ರೀಕಾಂತ್ ಕುಮಾರ ಜೆನಾ, ಸಚಿನ್‌ ಪೈಲಟ್‌‌, ಜಿತೇಂದ್ರ ಸಿಂಗ್‌, ಪ್ರದೀಪ್ ಜೈನ್ ಆದಿತ್ಯ, ಪಿ.ಬಲರಾಮ್ ನಾಯಕ, ಕೆ ಕೃಪಾರಾನಿ, ಲಾಲಚಂದ ಕಟಾರಿಯಾ, ಮಾಣಿಕರಾವ್ ಗಾವಿತ್ ಮತ್ತು ನ್ಯಾಶನಲ್‌ ಕಾಂಗ್ರೆಸ್‌ನ ಫಾರುಕ್‌ ಅಬ್ದುಲ್ಲಾ ಇದ್ದಾರೆ ಎಂದು ಬುಧವಾರ ಲೋಕಸಭೇಯಲ್ಲಿ ಕೇಂದ್ರ ನಗರಾಭಿವೃದ್ದಿ ಸಚಿವ ಎಮ್‌‌‌.ವೆಂಕಯ್ಯಾ ನಾಯ್ಡು ತಿಳಿಸಿದ್ದಾರೆ. 
 
ಬಂಗಲೆ ಖಾಲಿ ಮಾಡದ ಮಾಜಿ ಮಂತ್ರಿಗಳ ಮೇಲೆ ಜುಲೈ 26 ರವರೆಗೆ 20,19,463 ರೂಪಾಯಿ ದಂಡ ವಿಧಿಸಲಾಗಿದೆ. ಇದರಲ್ಲಿ 2,43,678 ರೂಪಾಯಿಗಳಷ್ಟು ಮೊತ್ತ ಜಯಪಾಲ್‌ ರೆಡ್ಡಿ ಮೇಲೆ ದಂಡ ವಿಧಿಸಲಾಗಿದೆ ಎಂದು ವೆಂಕಯ್ಯಾ ನಾಯ್ಡು ತಿಳಿಸಿದ್ದಾರೆ. ಹಳೆಯ ಸಚಿವರು ಮನೆ ಖಾಲಿ ಮಾಡಿದ ಮೇಲೆ ಹೊಸ 540 ಸಂಸದರಿಗೆ  2-3 ದಿನಗಳಲ್ಲಿ ಸರ್ಕಾರಿ ಬಂಗಲೆ ನೀಡಲಾಗುವುದು.  ಮೊದಲು ವರ್ಷಗಳವರೆಗೆ ಸಂಸದರಿಗೆ ಮನೆ ಖಾಲಿ ಮಾಡುವ ಕುರಿತು ಎಕ್ಸಟೆನ್ಶನ್‌ ಸಿಗುತ್ತಿತ್ತು, ಆದರೆ ಈಗ ಮೋದಿ ಸರ್ಕಾರವಿದೆ. ಎಂದು ಲೋಕಸಭೆಯ ಆವಾಸ ಸಮಿತಿಯ ಅಧ್ಯಕ್ಷ ಕಿರಿಟ್‌ ಸೋಮಯ್ಯಾ ತಿಳಿಸಿದ್ದಾರೆ.  
 
ಸ್ಮೃತಿ ಇರಾನಿ, ನಿರ್ಮಲಾ ಸಿತಾರಾಂ, ಜತೇಂದ್ರ ಸಿಂಗ್‌‌ ಸಹಿತ ಕೆಲವು ಮಂತ್ರಿಗಳಿಗೆ ಇಲ್ಲಿಯವರೆಗೆ ಸರ್ಕಾರಿ ಮನೆ ಲಭಿಸಿಲ್ಲ. ಕೇವಲ ಯುಪಿಎಸ್‌ ನಾಯಕರಷ್ಟೆ ಅಲ್ಲ, ಬಿಜೆಪಿ ಬಿಟ್ಟು ಹೊದ ಜಸವಂತ್‌ ಸಿಂಗ್‌ ಸಹಿತ ಕೆಲವು ನಾಯಕರು ಚುನಾವಣೆಯಲ್ಲಿ ಸೋತರು ಕೂಡ ಈಗಲೂ ಸರ್ಕಾರಿ ಮನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ