ಮೋದಿ ಸರಕಾರ ಬಡವರ ಪರ, ಅಂಬಾನಿ, ಅದಾನಿ ಪರವಲ್ಲ: ನಾಯ್ಡು

ಸೋಮವಾರ, 20 ಏಪ್ರಿಲ್ 2015 (15:34 IST)
ಮೋದಿ ಸರಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ  ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ವೆಂಕಯ್ಯ ನಾಯ್ಡು, "ಅಂಬಾನಿ ಮತ್ತು ಅದಾನಿ ಮೊದಲಿನಿಂದಲೂ ಶ್ರೀಮಂತರಾಗಿದ್ದಾರೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅವರು ಸಂಪತ್ತನ್ನು ಕೂಡಿ ಹಾಕಿಲ್ಲ", ಎಂದಿದ್ದಾರೆ. 

ಭಾನುವಾರ ತಮ್ಮ ಪಕ್ಷದ ಸಂಸದರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ತಾನು ಬಡವರ ಕೆಲಸ ಮಾಡುವಲ್ಲಿ ತತ್ಪರನಾಗಿದ್ದೇನೆ ಹೊರತು ವಿರೋಧಿಗಳು ಆರೋಪಿಸಿದಂತೆ ಕಾರ್ಪೋರೇಟ್ ಕಂಪನಿಗಳ ಪರವಲ್ಲ", ಎಂದಿದ್ದರು.
 
"ನಾನು ಕೈಗೊಳ್ಳುವ ಎಲ್ಲಾ ಯೋಜನೆಗಳು ಬಡವರ ಕಲ್ಯಾಣದ ಉದ್ದೇಶವನ್ನೇ ಹೊಂದಿವೆ. ಬಡವರ ಸೇವೆ ಮಾಡಲು ಗೆದ್ದಿರುವ ನಾವು ಅವರಿಗಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಸದಾ ಸುದ್ದಿಯಲ್ಲಿರಲು ಆಡಳಿತದ ಚುಕ್ಕಾಣಿ ಹಿಡಿದಿಲ್ಲ. ಬಡವರಿಗಾಗಿ ಕೆಲಸ ಮಾಡದಿದ್ದರೆ ನಮಗೆ ನೆಮ್ಮದಿಯ ನಿದ್ದೆ ಬರುವುದಿಲ್ಲ. ನಾವು ಬದುಕುವುದು, ಸಾರ್ವಜನಿಕ ಜೀವನದಲ್ಲಿರುವುದು ತಳಮಟ್ಟದಲ್ಲಿರುವವರಿಗಾಗಿ ಹೊರತು ಅಧಿಕಾರವನ್ನು ಅನುಭವಿಸುವುದಕ್ಕಾಗಿ ಅಲ್ಲ", ಎಂದು ಮೋದಿ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ