ಭಯೋತ್ಪಾದನೆಯ ವಿರುದ್ಧ ವಿಶ್ವವೇ ಒಂದಾಗಿ ಸಮರ ಸಾರಬೇಕು: ಪ್ರಧಾನಿ ಮೋದಿ

ಗುರುವಾರ, 31 ಮಾರ್ಚ್ 2016 (08:49 IST)
ಭಯೋತ್ಪಾದನೆಯ ವಿರುದ್ಧ ಭಾರತ ಯಾವತ್ತೂ ತಲೆತಗ್ಗಿಸಿಲ್ಲ. ಮುಂದೆಯೂ ತಲೆ ತಗ್ಗಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
 
ಬ್ರೂಸೆಲ್ಸ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರೂಸೆಲ್ಸ್‌ನಲ್ಲಿ ನಡೆದ ಭಯೋತ್ಪಾದನೆ ದಾಳಿ ಹೇಡಿಗಳ ಕೃತ್ಯ. ಭಾರತ ಉಗ್ರವಾದದ ವಿರುದ್ಧ ಯಾವತ್ತೂ ತಲೆಬಾಗಿಸುವುದಿಲ್ಲ ಎಂದರು. 
 
ವಿಶ್ವವು ಒಂದಾಗಿ ಭಯೋತ್ಪಾದನೆಯನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಉತ್ತಮ ಭಯೋತ್ಪಾದನೆ ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸುವುದನ್ನು ನಿಲ್ಲಿಸಬೇಕಾಗಿದೆ. ಯಾವುದೇ ಧರ್ಮ ಭಯೋತ್ಪಾದನೆಯನ್ನು ಸಾರುವುದಿಲ್ಲ ಎಂದು ತಿರುಗೇಟು ನೀಡಿದರು.
 
ಭಯೋತ್ಪಾದನೆ ಮಾನವ ಕುಲಕ್ಕೆ ಸವಾಲಾಗಿದೆ. ಯಾವುದೇ ದೇಶ ಅಥವಾ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಮಾನವೀಯತೆಯ ಮೇಲೆ ನಂಬಿಕೆಯಿರುವವರು ಒಂದಾಗಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಬೇಕಾಗಿದೆ ಎಂದು ಕರೆ ನೀಡಿದರು.
 
ವಿಶ್ವದ ಅನೇಕ ನಾಯಕರೊಂದಿಗೆ ಚರ್ಚೆಸಿ ಧರ್ಮವನ್ನು ಭಯೋತ್ಪಾದನೆಯಿಂದ ಬೇರ್ಪಡಿಸುವಂತೆ ಕೋರಿದ್ದೇನೆ. ಯಾವುದೇ ಧರ್ಮ ಉಗ್ರವಾದವನ್ನು ಕಲಿಸುವುದಿಲ್ಲ. ವಿಶ್ವಕ್ಕೆ ಭಯೋತ್ಪಾದನೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ