ಮೋದಿಯನ್ನು ಭೇಟಿಯಾದ ಮನಮೋಹನ್

ಗುರುವಾರ, 28 ಮೇ 2015 (14:33 IST)
ಎನ್‌ಡಿಎ ಸರ್ಕಾರದ ಮೇಲೆ ಕಿಡಿಕಾರಿದ ಕೆಲ ಗಂಟೆಗಳಲ್ಲಿಯೇ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು  ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ  ಭೇಟಿ ನೀಡಿ ಮಾತುಕತೆ ನಡೆಸಿದರು. 

 
ಆರ್ಥಿಕ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ಚರ್ಚಿಸಲು ಪ್ರಧಾನಿಯೇ ಅವರನ್ನು ಆಹ್ವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಸಂಜೆ ಈ ಭೇಟಿ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಬುಧವಾರ ಸಂಜೆಗೆ ಮುಂದೂಡಲಾಗಿತ್ತು. 
 
ಮಾಜಿ ಮತ್ತು ಹಾಲಿ ಪ್ರಧಾನಿಗಳ ನಡುವಿನ ಮಾತುಕತೆ ರಾಜಕೀಯ ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ.
 
ವಿಶೇಷವಾಗಿ ಮೋದಿಯವರು ತಮ್ಮಿಬ್ಬರ ಮಾತುಕತೆ ಮುಗಿದ ತಕ್ಷಣವೇ, ಡಾಕ್ಟರ್ ಮನಮೋಹನ್ ಅವರನ್ನು ಭೇಟಿಯಾಗಿರುವುದು ಮತ್ತು 7ಆರ್‌ಸಿಆರ್‌ಗೆ ಮರಳಿರುವ ಅವರನ್ನು ಸ್ವಾಗತಿಸಿರುವುದು ಸಂತೋಷವನ್ನು ತಂದಿದೆ. ನಮ್ಮಿಬ್ಬರ ನಡುವೆ ಮಹತ್ತರವಾದ ಮಾತುಕತೆಯಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ