ಮೋದಿ ಸಮೀಪ ಕುಳಿತುಕೊಳ್ಳಲು 15 ಲಕ್ಷ ವೆಚ್ಚಕ್ಕೂ ಅಭಿಮಾನಿಗಳು ಸಿದ್ಧ

ಶನಿವಾರ, 13 ಸೆಪ್ಟಂಬರ್ 2014 (11:55 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆ ಈಗ ನ್ಯೂಯಾರ್ಕ್ ನಗರದಲ್ಲಿ ಕೂಡ ಕಲರವ ಉಂಟುಮಾಡುತ್ತಿದೆ. ನರೇಂದ್ರ ಮೋದಿ ನ್ಯೂಯಾರ್ಕ್‌ನಲ್ಲಿ ರಾಕ್ ಸ್ಟಾರ್‌ಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ.  ಮೋದಿ ಸೆ.28ಕಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರ ಸಮೀಪದಲ್ಲೇ ಕುಳಿತುಕೊಳ್ಳುವ ಸೌಭಾಗ್ಯಕ್ಕಾಗಿ ಧಾರಾಳವಾಗಿ ಹಣ ಖರ್ಚು ಮಾಡಲು ಅನಿವಾಸಿ ಭಾರತೀಯರು ತಯಾರಿದ್ದಾರೆ.

ಮೋದಿ ಅವರ ಹಳೆಯ ಸ್ನೇಹಿತ ಡಾ. ಭಾರತ್ ಬರಾಯ್ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಮೋದಿ ಭೇಟಿಯನ್ನು ಹಿರಿಯ ಪತ್ರಕರ್ತೆ ಶೀಲಾ ಭಟ್ ವರದಿ ಮಾಡಲಿದ್ದಾರೆ. ಅವರ ಎಂಎಸ್‌ಜಿ ಕಾರ್ಯಕ್ರಮದ ರೀತಿ ಇದೊಂದು ಸೋಲ್ಡ್ ಔಟ್ ವಿದ್ಯಮಾನವಾಗಿದೆ.  ಅವರ ಪ್ರಕಾರ ಅನಿವಾಸಿ ಭಾರತೀಯರು ಭಾನುವಾರ ಸಂಜೆ ಮೋದಿಗೆ ಅತಿ ಸಮೀಪದಲ್ಲಿ ಕುಳಿತುಕೊಳ್ಳಲು 15 ಲಕ್ಷ ಕೊಡುವುದಕ್ಕೆ ಕೂಡ ಸಿದ್ಧರಿದ್ದಾರೆ.

 ಅದಕ್ಕಿಂತ ಹೆಚ್ಚು ವೆಚ್ಚ ಮಾಡಲು ಶಕ್ತರಾಗುವವರು ಪೀರೆ ಹೊಟೆಲ್‌ನಲ್ಲಿ ಮೋದಿ ಜೊತೆ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಭಾಗ್ಯ ಸಿಗಲಿದೆ. ಪ್ರಾಯೋಜಕ ಅತಿಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ ಮತ್ತು ಅವರನ್ನು ಸಮೀಪಿಸಲು ಮೋದಿ ಅಭಿಮಾನಿಗಳು ಎಲ್ಲಾ ಪ್ರಯತ್ನ ಮಾಡಿದ್ದಾರೆ.

ಮೋದಿ ಜೊತೆ ಕುಳಿತು ಭೋಜನಕೂಟ ಸವಿಯಲು ಮತ್ತು ಮೋದಿ ಜೊತೆ ಸೆಲ್ಫೀ ತೆಗೆಯಲು 15 ಲಕ್ಷದಿಂದ 30 ಲಕ್ಷ ಖರ್ಚು ಮಾಡಲು ತಯಾರಾಗಿದ್ದಾರೆ. ಕೆಲವು ಭಾರತೀಯ ಅಮೆರಿಕನ್ ವ್ಯಾಪಾರಿಗಳು ನರೇಂದ್ರ ಮೋದಿ ಅವರ ಸೆ.28ರ ಕಾರ್ಯಕ್ರಮಕ್ಕೆ ಸೃಷ್ಟಿಸಿದ ಪಿಎಂವಿಸಿಟ್.ಆರ್ಗ್‌ ಮೂಲಕ 70,000 ಡಾಲರ್ ದೇಣಿಗೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ