ದೀಪಾವಳಿ ದಿನ ಯೋಧರಿಗಾಗಿ ಮಿಡಿದ ಪ್ರಧಾನಿ ಹೃದಯ

ಗುರುವಾರ, 23 ಅಕ್ಟೋಬರ್ 2014 (17:18 IST)
ಇಡೀ ದೇಶಕ್ಕೆ ದೇಶಕ್ಕೆ ದೀಪಾವಳಿ ಸಂಭ್ರಮದಲ್ಲಿ ಮೈಮರೆತಿದ್ದರೆ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಹೃದಯ ಯೋಧರಿಗಾಗಿ ಮಿಡಿಯಿತು. ಅದಕ್ಕಾಗಿಯೇ ಅವರು ಈ ಬಾರಿ ದೀಪಾವಳಿಯ ವಿಶೇಷ ಆಚರಣೆಗೆ ನಿರ್ಧರಿಸಿ ಸಿಯಾಚಿನ್‌ಗೆ ತೆರಳಿದರು. ಪ್ರತಿಯೊಬ್ಬ ಯೋಧರ ಕೈಕುಲುಕಿ ಅವರಿಗೆ ಶುಭ ಹಾರೈಸಿದರು. ಅತ್ತ ಪ್ರಧಾನಿ ಸಿಯಾಚಿನ್ ತೆರಳಿ ಯೋಧರನ್ನು ಭೇಟಿ ಮಾಡುವುದಕ್ಕೆ ಮುಂಚಿತವಾಗಿ  ಪಾಕಿಸ್ತಾನದ ಗಡಿಯಾಚೆ ಕದನವಿರಾಮ ಉಲ್ಲಂಘಿಸಿ ಪಾಕ್ ಯೋಧರು ಬಿಎಸ್‌ಎಫ್ ಯೋಧರ ಮೇಲೆ  ಗುಂಡಿನ ದಾಳಿ ಮುಂದುವರಿಸಿದ್ದರು.

ಸಿಯಾಚಿನ್‌ನಲ್ಲಿ ಪ್ರಧಾನಿ ಮಾತನಾಡುತ್ತಾ,   ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸುವುದು ನನ್ನ ಭಾಗ್ಯ ಎಂದು ಹೇಳಿದರು. ಜಮ್ಮುಕಾಶ್ಮೀರದಲ್ಲಿ ಪ್ರವಾಹದ ವೇಳೆ ಯೋಧರ ಕಾರ್ಯ ಶ್ಲಾಘನೀಯ, ಯೋಧರಿಂದಲೇ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಮೋದಿ ಹೇಳಿದರು.

ಈ ದೀಪಾವಳಿ ನನಗೆ ಮರೆಯಲಾಗದ ದಿನ, ದೇಶದ 125 ಕೋಟಿ ಜನರು ಯೋಧರಿಂದ ಸುರಕ್ಷಿತವಾಗಿ ಹಬ್ಬ ಆಚರಿಸುತ್ತಿದ್ದಾರೆ. ನಿಮಗೆ ದೇಶ ಹೆಗಲಿಗೆ ಹೆಗಲು ಕೊಡುತ್ತದೆ. ಈ ದೀಪಾವಳಿ ನನಗೆ ಅತ್ಯಂತ ವಿಶೇಷವಾದದ್ದು. ನಿಮ್ಮ ಕನಸು , ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಧಾನಿ ಯೋಧರುನ್ನುದ್ದೇಶಿಸಿ ಹೇಳಿದರು. 

ವೆಬ್ದುನಿಯಾವನ್ನು ಓದಿ