ವಿಶ್ವದ ಎರಡನೇ ಜನಪ್ರಿಯ ನಾಯಕರೆನಿಸಿದ ಮೋದಿ

ಶುಕ್ರವಾರ, 19 ಡಿಸೆಂಬರ್ 2014 (18:05 IST)
ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ.
ತಮ್ಮ  ದೇಶವನ್ನಾಳುವ ನಾಯಕರ ಬಗೆಗೆ ಜನತೆಗಿರುವ ವಿಶ್ವಾಸದ ಕುರಿತು ಜಗತ್ತಿನ 30 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ತಮ್ಮ ದೇಶವಾಸಿಗಳ ಬೆಂಬಲವನ್ನು ಪಡೆದಿರುವವರಲ್ಲಿ ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್‌ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಹಿಂದಿಕ್ಕಿದ್ದಾರೆ. ದೇಶಿಯ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ನಾಯಕರು ಎಷ್ಟು ಸಮರ್ಥರು ಎಂಬ ವಿಷಯದಲ್ಲಿ ಸಮೀಕ್ಷೆ ನಡೆದಿತ್ತು. 
 
ಜಪಾನಿನ ಕಂಪನಿ ಜಿಎಮ್‌ಓ ನಡೆಸಿದ ಸಂಶೋಧನೆ ಈ ಫಲಿತಾಂಶವನ್ನು ನೀಡಿದೆ. 30 ದೇಶಗಳಲ್ಲಿ 26,000 ಜನರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗಿತ್ತು. ಪ್ರಜಾಪ್ರಭುತ್ವದ ಆಡಳಿತ ಮತ್ತು  ಹಾರ್ವರ್ಡ್ ವಿಶ್ವವಿದ್ಯಾಲಯದ ಆಸ್ ಸೆಂಟರ್ ಪ್ರಾಧ್ಯಾಪಕರಾಗಿರುವ  ಟೋನಿ ಸೈಚ್ ಗುರುವಾರ ಬಿಡುಗಡೆ ಮಾಡಿರುವ ಸಂಶೋಧನಾ ಪತ್ರಿಕೆಯಲ್ಲಿ ಇದು ಪ್ರಕಟವಾಗಿದೆ. 
 
ಭಾರತ, ಚೀನಾ, ಯುನೈಟೆಡ್ ಸ್ಟೇಟ್ಸ್, ರಷ್ಯಾ ಹಾಗೂ ಜಪಾನ್ ಸೇರಿದಂತೆ 10 ಪ್ರಮುಖ ದೇಶಗಳಲ್ಲಿ  ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳನ್ನು ನಿಭಾಯಿಸಲು ದೇಶದ ನಾಯಕರು ಎಷ್ಟರ ಮಟ್ಟಿಗೆ ಸಮರ್ಥರು ಎಂಬ ಬಗ್ಗೆ, ನಡೆಸಿದ ಅಧ್ಯಯನದಲ್ಲಿ,  ದೇಶೀಯ ಸಮಸ್ಯೆಗಳನ್ನು ನಿಭಾಯಿಸಲು ಚೀನಿ ಪ್ರಧಾನಿ ಸಮರ್ಥರೆಂದು 94.8 ಜನರು ವಿಶ್ವಾಸ ವ್ಯಕ್ತಪಡಿಸಿದರೆ, ವಿದೇಶಿ ವ್ಯವಹಾರಗಳ ನಿರ್ವಹಣೆಯಲ್ಲಿ ಶೇ 93,8 ಜನರು ಅವರನ್ನು ಮೆಚ್ಚಿಕೊಂಡಿದ್ದಾರೆ.
 
ದೇಶಿಯ ವ್ಯವಹಾರಗಳ ನಿರ್ವಹಣೆಯಲ್ಲಿ ಮೋದಿ ಸಮರ್ಥರು ಎಂದು 93.2 ರಷ್ಟು ಜನರು ಒಪ್ಪಿಕೊಂಡಿದ್ದಾರೆ.  ಅಂತರಾಷ್ಟ್ರೀಯ ವಿಷಯಗಳಲ್ಲಿ ಅವರ ನಿರ್ವಹಣಾ ಸಾಮರ್ಥ್ಯಕ್ಕೆ 93.3 ರಷ್ಟು ಸಹಮತ ವ್ಯಕ್ತವಾಗಿದೆ. ರಶಿಯಾದ ರಾಷ್ಟ್ರಪತಿ 86 ಪ್ರತಿಶತ ಜನರ ಬೆಂಬಲ ಪಡೆದುಕೊಂಡು ಮೂರನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ