ದೇಶದ ಜನತೆಯನ್ನು ವಂಚಿಸಿದ್ದರಿಂದ ಮೋದಿಗೆ ಶಿಕ್ಷೆಯಾಗಲೇಬೇಕು: ರಾಮ್ ಜೇಠ್ಮಲಾನಿ

ಭಾನುವಾರ, 4 ಅಕ್ಟೋಬರ್ 2015 (17:53 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನು ವಂಚಿಸಿದ್ದರಿಂದ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಸುಪ್ರೀಂಕೋರ್ಟ್‌ನ ಖ್ಯಾತ ವಕೀಲ ಉಚ್ಚಾಟಿತ ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸದೆ ವಂಚಿಸಿದ್ದಾರೆ. ಆದ್ದರಿಂದ ಜನತಾ ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆಯಾಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮುಂಬರುವ ಬಿಹಾರ್ ಚುನಾವಣೆಯಲ್ಲಿ ನಾನು ಮತ ಚಲಾವಣೆ ಮಾಡಬೇಕಾದಲ್ಲಿ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಪರವಾಗಿ ಮತ ಚಲಾಯಿಸುತ್ತೇನೆ ಎಂದಿದ್ದಾರೆ.
 
ಬಿಹಾರ್ ಚುನಾವಣೆಯಲ್ಲಿ ಮೋದಿ ಸೋಲಬೇಕು ಎನ್ನುವ ಉದ್ದೇಶದಿಂದ ನಿತೀಶ್ ಕುಮಾರ್ ಪರ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.
 
ಕಳೆದ ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಮತ್ತು ನನ್ನ ಸಂಬಂಧ ಹಳಸಿಹೋಗಿದೆ ಎಂದು ರಾಮ್ ಜೇಠ್ಮಲಾನಿ ಘೋಷಿಸಿದ್ದರು. 
 
ಸಿವಿಸಿ ಮುಖ್ಯಸ್ಥರನ್ನಾಗಿ ಕೆ.ವಿ.ಚೌಧರಿಯವರನ್ನು ಆಯ್ಕೆ ಮಾಡಿರುವ ಪ್ರಧಾನಿ ಮೋದಿ ಕ್ರಮವನ್ನು ವಿರೋಧಿಸಿದ್ದ ಜೇಠ್ಮಲಾನಿ, ಇದೀಗ ಅವರ ನೇಮಕಾತಿ ಕುರಿತಂತೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 
ಪ್ರಧಾನಿ ಮೋದಿ ನಮಗೆ ನಿಮ್ಮ ಮೇಲಿದ್ದ ಗೌರವ ಇವತ್ತಿಗೆ ಕೊನೆಗೊಂಡಿದೆ. ನಿಮ್ಮ ವಂಚನೆ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ಮತ್ತು ಜನತಾ ನ್ಯಾಯಾಲದಲ್ಲಿ ಹೋರಾಟ ನಡೆಸುತ್ತೇನೆ ಎಂದು ರಾಮ್ ಡೇಠ್ಮಲಾನಿ ಗುಡುಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ