ಮೋದಿ ಜೊತೆ ಉದ್ಯಮಿಗಳು ಜಪಾನಿಗೆ....!

ಗುರುವಾರ, 28 ಆಗಸ್ಟ್ 2014 (11:19 IST)
ಮುಂದಿನ ಶನಿವಾರ ಪ್ರಧಾನಿ ಮೋದಿ ಜೊತೆ ಉದ್ಯಮಿಗಳ ದಂಡು ಜಪಾನಿಗೆ ಪ್ರಯಾಣ ಬೆಳೆಸಲಿದೆ ಎಂದು ವರದಿಯಾಗಿದೆ.

ಜಪಾನ್ ಪ್ರಧಾನಿ ಶಿಂಜೋ ಅಬೆ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಇದೇ ವೇಳೆ ಭಾರತೀಯ ಉದ್ಯಮಿಗಳು ಹೂಡಿಕೆ ವಿಚಾರವಾಗಿ ಅಲ್ಲಿನ ಸರಕಾರದ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. 
 
ಮುಖೇಶ್ ಅಂಬಾನಿ, ಗೌತಮ ಅದಾನಿ, ಅಜೀಂ ಪ್ರೇಮ್ ಜೀ, ಚಂದಾ ಕೊಚ್ಚಾರ್ ಸೇರಿದಂತೆ ಸುಮಾರು 10ಕ್ಕೂ ಉದ್ಯಮಿಗಳು ಮೋದಿ ಜೊತೆ ಜಪಾನ್ ತೆರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ