ಪ್ರಧಾನಮಂತ್ರಿ ಮೋದಿಯ 10 ಜನಪ್ರಿಯ ನುಡಿಮುತ್ತುಗಳು ಕೆಳಗಿವೆ

ಗುರುವಾರ, 30 ಅಕ್ಟೋಬರ್ 2014 (16:55 IST)
ಸ್ವತಂತ್ರಭಾರತದ ಇತಿಹಾಸ ನೋಡಿದಾಗ, ಮುಖಂಡರು ಹೇಳುವ ನುಡಿಮುತ್ತುಗಳು ಜನರ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆಯುತ್ತದೆಂದು ಸ್ಪಷ್ಟವಾಗಿದೆ.  ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್  ಅಥವಾ ವಾಜಪೇಯಿ ಅವರ ಜೈ ಜವಾನ್, ಜೈ ಕಿಸಾನ್,  ಜೈ ವಿಜ್ಞಾನ್, ಅಥವಾ ಇಂದಿರಾ ಗಾಂಧಿ ಗರೀಬಿ ಹಠಾವೋ ಘೋಷಣೆಗಳು ಇಂದಿಗೂ ನಾಡಿನಾದ್ಯಂತ ಮಾರ್ದನಿಸುತ್ತಿವೆ. 
 
 ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಪದಗಳ ಕೌಶಲ್ಯದಿಂದ ಜನಪ್ರಿಯತೆಯ ಅದೇ ಹಾದಿ ಅನುಸರಿಸಿದ್ದಾರೆ. ಮೋದಿಯವರ 10 ಅಗ್ರ ನುಡಿಮುತ್ತುಗಳು ಕೆಳಗಿವೆ 
 
 
1. ನಾನು ಸುಲಭ ಕೆಲಸಗಳನ್ನು ಮಾಡುವುದಾದರೆ ಪ್ರಧಾನಿಯಾಗಿ ಆಯ್ಕೆಯಾಗುತ್ತಲೇ ಇರಲಿಲ್ಲ. ನಾನು ಕಷ್ಟದ ಕೆಲಸಗಳನ್ನು ಮಾಡುವುದಕ್ಕೆ ಪ್ರಧಾನಿಯಾಗಿದ್ದೇನೆ.
2.ನಿಮಗೆ ಮಾನವ ಸಂಪನ್ಮೂಲ ಮತ್ತು ಕಡಿಮೆ ವೆಚ್ಚದ ಉತ್ಪಾದನೆ ಬೇಕಿದ್ದರೆ ಭಾರತ ನಿಮಗೆ ಪ್ರಶಸ್ತ ಸ್ಥಳ. ಮೇಕ್ ಇನ್ ಇಂಡಿಯಾ ಉಪಕ್ರಮದಲ್ಲಿ ಭಾಗಿಯಾಗಲು ನಿಮಗೆ ಆಹ್ವಾನಿಸುತ್ತೇನೆ.
 
3. ನಮ್ಮ ಪೂರ್ವಜರು ಹಾವಿನ ಜೊತೆ ಆಟವಾಡಿರಬಹುದು. ಆದರೆ ನಾವು ಈಗ ಇಲಿ(ಕಂಪ್ಯೂಟರ್ ಮೌಸ್) ಜೊತೆ ಆಟವಾಡುತ್ತೇವೆ.
4.ಅಹ್ಮದಾಬಾದ್‌ನಲ್ಲಿ ಆಟೋರಿಕ್ಷಾ ಪ್ರತಿ ಕಿಮೀಗೆ 10 ರೂ. ಶುಲ್ಕ ವಿಧಿಸುತ್ತದೆ. ಆದರೆ ನಾವು ಮಂಗಳ ಗ್ರಹಕ್ಕೆ ಕಿಮೀಗೆ 7 ರೂ. ದರದಲ್ಲಿ ಹೋಗುತ್ತೇವೆ.
5. ದೇಶಕ್ಕಾಗಿ ಜೀವತ್ಯಾಗ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಆದರೆ ದೇಶಕ್ಕಾಗಿ ಬದುಕುವ ಅವಕಾಶ ನನಗೆ ಸಿಕ್ಕಿದೆ. 

 
6.ನಾನು ದಿನಕ್ಕೆ ಒಂದು ಅನುಪಯುಕ್ತ ಕಾನೂನನ್ನು ತ್ಯಜಿಸಲು ಸಾಧ್ಯವಾದರೆ, ನಾನು ಜಗತ್ತಿನಲ್ಲಿಯೇ ಸಂತೋಷದ ವ್ಯಕ್ತಿ.
 
7. ತಾಯಿಯ ಭ್ರೂಣವನ್ನು ಹತ್ಯೆ ಮಾಡುವ ಮೂಲಕ ನಿಮ್ಮ ಜೇಬನ್ನು ತುಂಬಬೇಡಿ. ತಮಗೆ ವಯಸ್ಸಾದಾಗ ಗಂಡುಮಕ್ಕಳು ನೋಡಿಕೊಳ್ಳುತ್ತಾರೆಂಬ ಭಾವನೆ ಜನರಿಗಿರುತ್ತದೆ. ಆದರೆ ವೃದ್ಧಾಶ್ರಮಗಳಲ್ಲಿ ನಾನು ವಯಸ್ಸಾದ ತಂದೆ, ತಾಯಂದಿರನ್ನು ನೋಡಿದ್ದೇನೆ. ಐವರು ಗಂಡುಮಕ್ಕಳಿಗಿಂತ ಹೆಚ್ಚಾಗಿ ತಂದೆ, ತಾಯಿಗಳಿಗೆ ಹೆಣ್ಣುಮಗಳು ಸೇವೆ ಸಲ್ಲಿಸುವ ಕುಟುಂಬಗಳನ್ನು ನೋಡಿದ್ದೇನೆ. 
 
 8. 125 ಜನರು ಒಟ್ಟಾಗಿ ಕೆಲಸ ಮಾಡಿದರೆ ಭಾರತ 125 ಕೋಟಿ ಹೆಜ್ಜೆಗಳನ್ನು ಮುಂದಿಡುತ್ತದೆ.
9. ನಾನು ಪೋಷಕರನ್ನು ಕೇಳಲು ಬಯಸುತ್ತೇನೆ. ಹೆಣ್ಣುಮಕ್ಕಳು 11 ಅಥವಾ 14 ವಯಸ್ಸಿಗೆ ಬೆಳೆದಾಗ ಅವರ ಚಲನವಲನಗಳ ಬಗ್ಗೆ ಎಚ್ಚರವಹಿಸುತ್ತಾರೆ. ಆದರೆ ಈ ಪೋಷಕರು ಗಂಡುಮಕ್ಕಳನ್ನು ಎಲ್ಲಿಗೆ ಹೋಗುತ್ತೀರೆಂದು, ಯಾರನ್ನು ಭೇಟಿಯಾಗುತ್ತಾರೆಂದು ಕೇಳುತ್ತಾರಾ? ಅತ್ಯಾಚಾರಿಗಳು ಯಾರಾದರೊಬ್ಬರ ಗಂಡುಮಕ್ಕಳಾಗಿರುತ್ತಾರೆ. ಗಂಡುಮಕ್ಕಳು ಕೆಟ್ಟದಾರಿ ಹಿಡಿಯದಂತೆ ಪೋಷಕರು ಜವಾಬ್ದಾರಿ ವಹಿಸಬೇಕು. 10. ನಾನು ನಿಮ್ಮ ಮುಂದೆ ಪ್ರಧಾನ ಮಂತ್ರಿಯಾಗಿ ನಿಲ್ಲುವುದಿಲ್ಲ. ಆದರೆ ಪ್ರಧಾನ ಸೇವಕನಾಗಿ ನಿಲ್ಲುತ್ತೇನೆ. 

ವೆಬ್ದುನಿಯಾವನ್ನು ಓದಿ