ಸೀತೆಯ ತವರಿಗೆ ಹೋಗುತ್ತಿಲ್ಲ ಮೋದಿ....

ಶುಕ್ರವಾರ, 21 ನವೆಂಬರ್ 2014 (09:01 IST)
ನೇಪಾಳದ ಜನಕಪುರಿಗೆ ಮೋದಿಯವರ ಯೋಜಿತ ಭೇಟಿ ರದ್ದುಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಿಂದು ಪುರಾಣದ ಪ್ರಕಾರ, ಜನಕಪುರ ರಾಮಾಯಣ ಮಹಾಕಾವ್ಯದ ಪ್ರಧಾನ ಪಾತ್ರ ಸೀತೆಯ ತವರಾಗಿದ್ದು, ಅಲ್ಲಿ ಪ್ರಸಿದ್ಧ ಹಿಂದೂ ದೇವಾಲಯವಿದೆ.
 
"ಜನಕಪುರಿಗೆ ಭಾರತೀಯ ಪ್ರಧಾನಿ ಭೇಟಿ ರದ್ದುಗೊಂಡಿದೆ ಎಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ತಿಳಿಸಿದ್ದಾರೆ ಎಂದು ಹೇಳಲು ವಿಷಾದಿಸುತ್ತೇವೆ," ಎಂದು ನೇಪಾಳದ ಶಾರೀರಿಕ ಮೂಲಸೌಕರ್ಯ ಮತ್ತು ಸಾರಿಗೆ ನಿರ್ವಹಣಾ ಸಚಿವ ಬಿಮಲೇಂದ್ರ ನಿಧಿ ಹೇಳಿದ್ದಾರೆ.
 
ನೇಪಾಳದಲ್ಲಿ ನಡೆಯಲಿರುವ 18ನೇ ಸಾರ್ಕ್ ಶೃಂಗಸಭೆ ಹಾಜರಾಗಲಿರುವ ಮೋದಿಯವರು, ಬಿಡುವಿನ ಸಮಯದಲ್ಲಿ ಜನಕಪುರಿಗೆ ಭೇಟಿ ನೀಡಲು ಯೋಜಿಸಿದ್ದರು.ಆಗಸ್ಟ್ ಮೊದಲ ವಾರದಲ್ಲಿ ನೇಪಾಳಕ್ಕೆ ಅಧಿಕೃತ ಭೇಟಿ ನೀಡಿದ್ದ ಅವರು ಜನಕಪುರವನ್ನು ಸಂದರ್ಶಿಸುವ  ಭರವಸೆ ನೀಡಿದ್ದರು. ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ತಂಡ ಕೂಡ ಜನಕಪುರಕ್ಕೆ ಮುಂಗಡವಾಗಿ ಭೇಟಿ ನೀಡಿತ್ತು. ಪ್ರಧಾನಿ ಭೇಟಿಗೆ ಮುಂಜಾಗ್ರತೆಯಾಗಿ ಭಾರತ ನೇಪಾಳ ಗಡಿಯಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. 
 
ಬೌದ್ಧ ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಲುಂಬಿನಿ ಮತ್ತು ಮುಕ್ತಿನಾಥ್‌ಕ್ಕೆ ಪೂರ್ವ ನಿಗದಿಯಂತೆ ಮೋದಿಯವರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ