ಲಖ್ವಿ ಜಾಮೀನು ಸಂಬಂಧ ಪಾಕ್‌ಗೆ ಖಡಕ್ ಸಂದೇಶ ರವಾನೆ: ಮೋದಿ

ಶುಕ್ರವಾರ, 19 ಡಿಸೆಂಬರ್ 2014 (13:37 IST)
26/11ರ ಮುಂಬೈ ದಾಳಿಯ ಪ್ರಮುಖ ರೂವಾರಿಯೋರ್ವನಿಗೆ ಅಲ್ಲಿನ ಪಾಕಿಸ್ತಾನದ ಕೆಳ ಹಂತದ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದ್ದು, ಇದನ್ನು ಅಖಂಡ ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿರುವುದಾಗಿ ಪ್ರಧಾನಿ ಮೋದಿ ಲೋಕಸಭಾ ಕಲಾಪದಲ್ಲಿ ತಿಳಿಸಿದರು. 
 
26/11ರ ಮುಂಬೈ ದಾಳಿಯ ಪ್ರಮುಖ ರೂವಾರಿ ಹಾಗೂ ಆರೋಪಿ ಝಾಕಿ ಉರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನದ ಕೆಳ ಹಂತದ ನ್ಯಾಯಾಲಯ ನಿನ್ನೆ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆ ಕೇಂದ್ರ ಸರ್ಕಾರ ಯಾವ ರೀತಿಯ ನಿಲುವನ್ನು ಕೈಗೊಂಡಿದೆ ಎಂಬ ಬಗ್ಗೆ ಪ್ರಧಾನಿ ಮೋದಿಯೇ ಉತ್ತರಿಸಬೇಕೆಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮೋದಿ, ಲಖ್ವಿಗೆ ನಿಮ್ಮ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದನ್ನು ಅಖಂಡ ಭಾರತವೇ ತೀವ್ರವಾಗಿ ಖಂಡಿಸುತ್ತಿದೆ. ಅಲ್ಲದೆ ಜಾಮೀನು ಸಿಗದ ಹಾಗೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಲಾಗಿದೆ ಎಂದು ಖಡಕ್ ಸಂದೇಶ ರವಾನಿಸಲಾಗಿದೆ ಎಂದರು. 
 
ಇದೇ ವೇಳೆ, ಲಖ್ವಿ ಸಂದೇಶದ ಜೊತೆಗೆ ಅಲ್ಲಿನ ಪೇಶಾವರದಲ್ಲಿ ಶಾಲಾ ಮಕ್ಕಳ ಮೇಲೆ ನಡೆದಿದ್ದ ತಾಲಿಬಾನ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆಯೂ ಕೂಡ ಸಂದೇಶವನ್ನು ರವಾನಿಸಲಾಗಿದ್ದು, ಇಡೀ ಭಾರತವೇ ನಿಮ್ಮೊಂದಿಗಿದೆ. ಹಾಗಾಗಿ ತಾಲಿಬಾನಿಯರ ಸಂಹಾರಕ್ಕೆ ಭಾರತದ ಧ್ವನಿ ಎತ್ತು ಮೂಲಕ ಸಹಕರಿಸಲು ಸಿದ್ದವಿದ್ದು, ಸಹಕಾರ ಅಗತ್ಯ ಎನಿಸಿದಲ್ಲಿ ಮುಕ್ತ ಮನಸ್ಸಿನಿಂದ ಕೇಳಿ ಎಂದು ಸಂದೇಶ ರವಾನಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. 

ವೆಬ್ದುನಿಯಾವನ್ನು ಓದಿ