29 ರೂ. ಭೋಜನದ ಟ್ಯಾಬ್ ಆಯ್ಕೆಮಾಡಿಕೊಂಡ ಮೋದಿ

ಸೋಮವಾರ, 2 ಮಾರ್ಚ್ 2015 (15:07 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಇಂದು ಭೋಜನಕ್ಕೆ 29 ರೂ. ಭೋಜನದ ಟ್ಯಾಬ್ ಆಯ್ಕೆ ಮಾಡಿಕೊಂಡರು.ಸಂಸತ್ ಸದಸ್ಯರು ಸಬ್ಸಿಡಿ ದರದ ಭೋಜನವನ್ನು ಹೊಟ್ಟೆ ತುಂಬ ತಿಂದರೆ,  ಅಪರೂಪವೆಂಬಂತೆ ಮೋದಿ ಸಂಸತ್ತಿನ ಕ್ಯಾಂಟೀನ್‌ನಲ್ಲಿ ಮಾದರಿ ಲಂಚ್ ಸ್ವೀಕರಿಸಲು ನಿರ್ಧರಿಸಿದರು.

ಸಾಗ್, ಸಲಾಡ್, ದಲ್ ಮತ್ತು ಕರಿ ಹೊಂದಿರುವ ಸಸ್ಯಾಹಾರಿ ತಾಲಿಗೆ ಮೋದಿ ಆದೇಶಿಸಿದ್ದರು. ಇಬ್ಬರು ಗುಜರಾತಿ ಸಂಸದರು ಮೋದಿಗೆ ಊಟದಲ್ಲಿ ಕಂಪನಿ ನೀಡಿದರು.

ಸಂಸತ್ತಿನ ಕ್ಯಾಂಟೀನ್ ದೇಶದ ಅತೀ ಅಗ್ಗದ ಉಪಾಹಾರ ಗೃಹವಾಗಿದ್ದು, ಕೇವಲ 12ರೂ.ಗೆ ಸಂಸದರು ಮತ್ತು ಪತ್ರಕರ್ತರು ಕೂಡ ಒಳ್ಳೆಯ ಊಟ ಮಾಡಬಹುದು. ಇಲ್ಲಿ ಅತೀ ದುಬಾರಿ ತಿನಿಸು ಚಿಕನ್ ಬಿರಿಯಾನಿಯಾಗಿದ್ದು, ಒಂದು ಪ್ಲೇಟ್‌ಗೆ   34 ರೂ.ಗಳು. 

ವೆಬ್ದುನಿಯಾವನ್ನು ಓದಿ