ಉಭಯ ರಾಷ್ಟ್ರಗಳ ಭಾಂಧವ್ಯ ವೃದ್ಧಿಗೆ ಮೋದಿ ಪಾಕ್‌ಗೆ ಭೇಟಿ ನೀಡಲಿ: ಸುಧೀಂದ್ರ ಕುಲ್ಕರ್ಣಿ

ಶನಿವಾರ, 28 ನವೆಂಬರ್ 2015 (14:15 IST)
ಭಾರತ ಮತ್ತು ಪಾಕಿಸ್ತಾನ ದೇಶಗಳ ಮಧ್ಯೆ ಭಾಂಧವ್ಯ ವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕು ಎಂದು ಬಿಜೆಪಿ ಮುಖಂಡ ಸುಧೀಂದ್ರ ಕುಲ್ಕರ್ಣಿ ಹೇಳಿದ್ದಾರೆ.
 
ಕಳೆದ ತಿಂಗಳು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೆಹಮೂದ್ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿದ್ದಕ್ಕಾಗಿ ಶಿವಸೇನೆ ಕಾರ್ಯಕರ್ತರಿಂದ ಮಸಿ ಬಳಸಿಕೊಂಡಿದ್ದ ಕುಲ್ಕರ್ಣಿ, ಪಾಕಿಸ್ತಾನ ಕೂಡಾ ಕಠಿಣ ಕ್ರಮಗಳಿಂದ ಗಡಿಭಯೋತ್ಪಾದನೆಗೆ ಅಂತ್ಯಹಾಡಬೇಕು ಎಂದರು. 
 
ಪಾಕಿಸ್ತಾನ ರಾಯಭಾರಿ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕಾಶ್ಮಿರ ಸಮಸ್ಯೆಗೆ ಸೇನಾಕಾರ್ಯಾಚರಣೆ ಪರಿಹಾರವಲ್ಲ. ಪರಸ್ಪರರು ವೈಮನಸ್ಸು ತೊರೆದು ಚರ್ಚೆಗೆ ಮುಂದಾದಲ್ಲಿ ಮಾತ್ರ ಕಾಶ್ಮಿರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 
 
ಪ್ರಧಾನಿ ಮೋದಿ ವಿಶ್ವದ ಹಲವು ದೇಶಗಳಿಗೆ ಭೇಟಿ ನೀಡಿರುವುದನ್ನು ಸ್ವಾಗತಿಸಿ, ಮೋದಿ ದೇಶದ ಹಿರಿಮೆಯನ್ನು ವಿಶ್ವದಾದ್ಯಂತ ಹರಡುತ್ತಿದ್ದಾರೆ. ಭಾರತದ ಸಾಧನೆಗೆ ಇತರ ದೇಶಗಳು ಆಕರ್ಷಿತವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
 
ಗಮನಾರ್ಹ ವಿಷಯವೆಂದರೆ, ಪ್ರಧಾನಿ ಮೋದಿ ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ನೆರೆಯ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದಲ್ಲಿಯೇ ಜನಿಸಿದ್ದರೂ ಪಾಕ್‌ಗೆ ಭೇಟಿ ನೀಡಲಿಲ್ಲ. ಪ್ರಧಾನಿ ಮೋದಿ ಖಂಡಿತವಾಗಿಯೂ ಪಾಕ್‌ಗೆ ಭೇಟಿ ನೀಡಬೇಕು ಎಂದು ಬಿಜೆಪಿ ಮುಖಂಡ ಸುಧೀಂದ್ರ ಕುಲ್ಕರ್ಣಿ ಒತ್ತಾಯಿಸಿದರು. 

ವೆಬ್ದುನಿಯಾವನ್ನು ಓದಿ