ಮೋದಿ ಕ್ಷಮೆ ಕೇಳುವವರೆಗೆ, ಅವರ ಸಚಿವರನ್ನು ರಾಜ್ಯದೊಳಗಡೆ ನುಸುಳಲು ಬಿಡುವುದಿಲ್ಲ: ಹೇಮಂತ್‌ ಸೊರೆನ್‌

ಶನಿವಾರ, 23 ಆಗಸ್ಟ್ 2014 (17:15 IST)
ರಾಂಚಿಯ ಸರಕಾರಿ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌‌ ಅಪಹಾಸ್ಯಕೀಡಾದ ವಿಷಯ ಕಾವೇರಿದೆ. ಈ ಕಾರಣಕ್ಕಾಗಿ, ಮೋದಿ ದೇಶದ ಜನರಿಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮೋದಿ ಸಚಿವ ಸಂಪುಟದ ಯಾವುದೇ ಮಂತ್ರಿಯನ್ನು ಜಾರ್ಖಂಡ್‌‌‌ದಲ್ಲಿ ಬಹಿರಂಗವಾಗಿ ಓಡಾಡಲು ಬಿಡುವುದಿಲ್ಲ ಎಂದು ಜಾರ್ಖಂಡ್‌‌‌ನ ಆಡಳಿತ ಪಕ್ಷವಾದ ಜಾರ್ಖಂಡ್‌ ಮುಕ್ತಿ ಮೊರ್ಚಾ ಬೆದರಿಕೆ ಹಾಕಿದೆ. 
  
ಶಿಲಾನ್ಯಾಸದ ಉದ್ಘಾಟನೆ ಮಾಡಲು ಮೋದಿ ಗುರುವಾರ ರಾಂಚಿಯಲ್ಲಿ ಮಳೆಯ ನಡುವೆ ಕೂಡ ವೇದಿಕೆ ಮೇಲೆ ಬಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ದುರ್ವಾದಲ್ಲಿರುವ ಪ್ರಭಾತ ತಾರಾ ಮೈದಾನದಲ್ಲಿ ಸಿದ್ದಪಡಿಸಲಾದ ವೇದಿಕೆಯ ಮೇಲೆ ಆರು ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಿದರು. ಆದರೆ, ಮೋದಿಯವರ ಭಾಷಣಕ್ಕು ಮೊದಲು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌‌ ಭಾಷಣನೀಡಲು ಮುಂದೆ ಬಂದಾಗ ಜನರು ಇವರ ವಿರುದ್ದ ದಿಕ್ಕಾರಗಳನ್ನು ಕೂಗತೊಡಗಿದರು. 
 
ಬಿಜೆಪಿ ಕುತಂತ್ರದಿಂದ ಸೊರೆನ್ ವಿರುದ್ದ ಘೋಷಣೆ ಕೂಗಲಾಗಿದೆ ಎಂದು ಕಾಂಗ್ರೆಸ್‌ ನಾಯಕಿ ಅಂಬಿಕಾ ಸೋನಿ ಆರೋಪಿಸಿದ್ದಾರೆ, ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, 'ದೇಶದಲ್ಲಿ ಪ್ರಧಾನಮಂತ್ರಿಯ ಜನಪ್ರೀಯತೆ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ತಿಳಿಸಿದೆ. 
 
ಖುದ್ದು ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ರವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ವೇದಿಕೆ ಹಂಚಿಕೊಂಡು ಮೇಲೆ, " ಭಾರತದಲ್ಲಿ ಸಂಘಟನಾತ್ಮಕ ವ್ಯವಸ್ಥೆ ಇದೆ. ನಾನು ಪ್ರಧಾನಮಂತ್ರಿ ಜೊತೆಗೆ ಕುಳಿತಿದ್ದೇನೆಯೇ ಹೊರತು ಯಾವುದೇ ಬಿಜೆಪಿ ನಾಯಕರ ಜೊತೆಯಲ್ಲ. ಒಂದು ವೇಳೆ ನೀವು ರಾಜಕೀಯ ಮಾಡಲು ಇಚ್ಛಿಸಿದ್ದರೆ, ಚುನಾವಣೆ ಎದುರಿಸಿ. ಸಂಘಟನಾತ್ಮಕ ವ್ಯವಸ್ಥೆಯಲ್ಲಿ ಈತರಹದ ಧಿಕ್ಕಾರ ಕೂಗುವುದು ಸರಿಯಲ್ಲ. ಇದು ವ್ಯವಸ್ಥೆಯ ಮೇಲಿನ ಬಲಾತ್ಕಾರವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ