ದೇವಾಲಯಕ್ಕೆ ಸ್ಥಳ ನೀಡಿದ ಯುಎಇ ಸರಕಾರವನ್ನು ಅಭಿನಂಧಿಸಿದ ಪ್ರಧಾನಿ ಮೋದಿ

ಮಂಗಳವಾರ, 18 ಆಗಸ್ಟ್ 2015 (15:45 IST)
ರಾಜಧಾನಿಯಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸ್ಥಳ ನೀಡಿದ ಯುಎಇ ಸರಕಾರದ ಕ್ರಮ ಶ್ರೇಷ್ಠ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
 
ಯುಎಇ ನಾಯಕರೊಂದಿಗೆ ಚರ್ಚೆ ನಡೆಸಿದ ನಂತರ ಜಂಟಿ ಹೇಳಿಕೆಯೊಂದನ್ನು ಹೊರಡಿಸಿರುವ ಮೋದಿ, ಯುಎಇ ದೇಶದಲ್ಲಿಯೇ ಮೊದಲ ಬಾರಿಗೆ ದೇವಸ್ಥಾನ ನಿರ್ಮಾಣಕ್ಕಾಗಿ ಸ್ಥಳಾವಕಾಶ ಕಲ್ಪಿಸಿದ ಪ್ರಿನ್ಸ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾ ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ. 
 
ದುಬೈ ನಗರದಲ್ಲಿ ಶಿವ ದೇವರು ಮತ್ತು ಕೃಷ್ಣ ದೇವರ ದೇವಾಲಯಗಳಿವೆ. ಆದರೆ ಅಬುಧಾಬಿಯಲ್ಲಿ ದೇವಾಲಯಗಳಿರಲಿಲ್ಲ ಎನ್ನಲಾಗಿದೆ.
 
ಯುಎಇ ದೇಶದ ಒಟ್ಟು ಜನಸಂಖ್ಯೆಯ ಶೇ.30 ರಷ್ಟು ಜನ ಭಾರತೀಯರು(2.6 ಮಿಲಿಯನ್)ವಾಸವಾಗಿದ್ದಾರೆ. ಯುಎಇ ಸರಕಾರದ ನಿರ್ಧಾರವನ್ನು ಭಾರತೀಯರು ಸ್ವಾಗತಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ