ಟ್ವಿಟರ್‌ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಮೂರನೇ ನಾಯಕರಾಗಿ ಮೋದಿ

ಮಂಗಳವಾರ, 28 ಏಪ್ರಿಲ್ 2015 (16:14 IST)
ಪ್ರಧಾನಿ ನರೇಂದ್ರ ಮೋದಿಯವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಮೂರನೇ ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ. ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಸಹ ಅತಿ ಹೆಚ್ಚು ಫಾಲೋವರ್ ಹೊಂದಿರುವ ವಿದೇಶಾಂಗ ಸಚಿವೆ ಎಂದು ಇತ್ತೀಚಿನ ಅಧ್ಯಯನವೊಂದು ಸಾಬೀತು ಪಡಿಸಿದೆ. 

ಐಎಎನ್‌ಎಸ್ ನಡೆಸಿದ ಟ್ವಿಪ್ಲೋಮಸಿ 2015 ಅಧ್ಯಯನದ ಪ್ರಕಾರ, 2.438.228 ಅನುಯಾಯಿಗಳೊಂದಿಗೆ ಸುಷ್ಮಾ ಸ್ವರಾಜ್ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ವಿದೇಶಾಂಗ ಸಚಿವರಾಗಿದ್ದರೆ, ಯುಎಇ ವಿದೇಶಾಂಗ ಸಚಿವ 'ಅಬ್ದುಲ್ಲಾ ಬಿನ್ ಜಾಯೆದ್ (1,608,831) ಮತ್ತು ಟರ್ಕಿಯ ಮೆವ್ಲ್‌ಟ್ ಕಾವುಸೊಗ್ಲು (376,429) ನಂತರದ ಸ್ಥಾನಗಳನ್ನು ಪಡೆದಿದ್ದಾರೆ. 
 
ಮಾರ್ಚ್ 24 ರ ವರೆಗಿನ ಡೇಟಾವನ್ನು ಆಧರಿಸಿರುವ ಈ ಅಧ್ಯಯನ, ಟ್ವಿಟರ್‌ನಲ್ಲಿ ನಡೆಸಲ್ಪಡುವ ವಿಶ್ವ ನಾಯಕರ ವಾರ್ಷಿಕ ಜಾಗತಿಕ ಸಮೀಕ್ಷೆ ಆಗಿದೆ. ವಿಶ್ವ ನಾಯಕರು ಅಂತರ್ಜಾಲವನ್ನು ಎಷ್ಟರ ಮಟ್ಟಿಗೆ ಬಳಸುತ್ತಾರೆ ಮತ್ತು  ಸಾಮಾಜಿಕ ಜಾಲದ ಮೂಲಕ ಸಂಪರ್ಕವನ್ನು ಯಾವ ರೀತಿಯಲ್ಲಿ ಸಾಧಿಸುತ್ತಾರೆ ಎಂಬುದನ್ನು ಪರಿಶೀಲಿಸುತ್ತದೆ. 
 
ಅಧ್ಯಯನದ ಪ್ರಕಾರ 56.933.515 ಅನುಯಾಯಿಗಳೊಂದಿಗೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ, 9 ವಿವಿಧ ಭಾಷೆಗಳಲ್ಲಿ ಖಾತೆ ಹೊಂದಿರುವ ಪೋಪ್ ಫ್ರಾನ್ಸಿಸ್ (19.580.910 ಅನುಯಾಯಿಗಳು), 10.902.510 ಅನುಯಾಯಿಗಳನ್ನು ಹೊಂದಿರುವ ಭಾರತದ ಪ್ರಧಾನಿ ಮೋದಿ ಕ್ರಮವಾಗಿ ಮೇಲಿನ ಮೂರು ಸ್ಥಾನಗಳನ್ನು ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ