ರೈತ ಸಮ್ಮೇಳನದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ

ಶುಕ್ರವಾರ, 5 ಫೆಬ್ರವರಿ 2016 (15:13 IST)
ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 18ರಂದು ಮಧ್ಯಪ್ರದೇಶದ ಶೆರ್ಪುರಾದ ಸೆಹೋರ್‌ ಜಿಲ್ಲೆಯಲ್ಲಿ ಬೃಹತ್ ರೈತ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಇದನ್ನು ಸ್ವತಃ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಮಧ್ಯಾಹ್ನ ಸ್ಪಷ್ಟಪಡಿಸಿದ್ದಾರೆ. ನಮ್ಮ ಸಿಂಹ (ಮೋದಿ) ಶೇರ್ಪುರಕ್ಕೆ ಬರುತ್ತಿದೆ, ಶೇರ್ಪುರದತ್ತ ನಡೆಯಿರಿ ಎಂದು ಅವರು ಘೋಷಿಸಿದ್ದಾರೆ.
 
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ದಿಂದ ಶೇರ್ಪುರ ಕೇವಲ 70ಕೀಲೋಮೀಚರ್ ದೂರದಲ್ಲಿದ್ದು ಈ ಪ್ರದೇಶ ಕೃಷಿಹಿನ್ನೆಲೆಯನ್ನು ಹೊಂದಿದೆ. 
 
ಹೊಸದಾಗಿ ಜಾರಿಯಲ್ಲಿ ತಂದಿರುವ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ ಕುರಿತು ಅರಿವು ಮೂಡಿಸಲು ಪ್ರಧಾನಿ ನಾಲ್ಕು ರಾಜ್ಯಗಳಲ್ಲಿ ಇಂತಹದ್ದೇ ನಾಲ್ಕು ಬೃಹತ್ ರೈತ ಸಮ್ಮೇಳನಗಳನ್ನು ನಡೆಸಲಿದ್ದು, ಅವುಗಳಲ್ಲಿ ಮೊದಲನೆಯದು ಇದಾಗಿದೆ. ಈ ಯೋಜನೆ ಅಡಿಯಲ್ಲಿ ನೈಸರ್ಗಿಕ ವಿಪತ್ತು, ಇತರೆ ವಿಕೋಪಗಳು ಮತ್ತು ಕೀಟದಾಳಿಗಳಿಂದ ಬೆಳೆ ಹಾನಿ ಮತ್ತು ನಾಶವಾದರೆ ರೈತ ಸಮುದಾಯಕ್ಕೆ ವಿಮೆ ಮತ್ತು ಆರ್ಥಿಕ ಭದ್ರತೆಯನ್ನು ನೀಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ