ಸಿಲಿಕಾನ್ ವ್ಯಾಲಿ ಭೇಟಿ: ನೆಹರು ನಂತ್ರ ಭೇಟಿ ನೀಡಲಿರುವ ಮೊದಲನೇ ಪ್ರಧಾನಿ ಮೋದಿ

ಭಾನುವಾರ, 19 ಜುಲೈ 2015 (17:32 IST)
ಪ್ರಸಕ್ತ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕದ ಪ್ರವಾಸದ ಸಂದರ್ಭದಲ್ಲಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿದ್ದಾರೆ.
1949ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ ನಂತರ, ಇದೀಗ ಮೊದಲ ಬಾರಿಗೆ ಭಾರತದ ಪ್ರಧಾನಿ ಮೋದಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿದ್ದಾರೆ. 
 
ಮಾಜಿ ಪ್ರಧಾನಿ ನೆಹರು ಕ್ಯಾಲಿಫೋರ್ನಿಯಾ ನಗರಕ್ಕೆ 1949ರಲ್ಲಿ ಭೇಟಿ ನೀಡಿದ್ದಾಗ ಸಿಲಿಕಾನ್ ವ್ಯಾಲಿ ಎನ್ನುವ ಹೆಸರಿರಲಿಲ್ಲ. 1970 ರ ನಂತರ ಸಿಲಿಕಾನ್ ವ್ಯಾಲಿ ಎಂದು ಹೆಸರಿಸಲಾಗಿತ್ತು. ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ ನಂತರದ ಪ್ರಮುಖ ನಗರವಾಗಿತ್ತು. 
 
ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿರುವ ಮೋದಿ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ