ಮೋದಿ 5 ಲಕ್ಷ ಮತಗಳಂತರದಿಂದ ಗೆಲ್ಲಲಿದ್ದಾರೆ.

ಗುರುವಾರ, 15 ಮೇ 2014 (18:21 IST)
ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ  ವಡೋದರಾದಲ್ಲಿ 5 ಲಕ್ಷ ಮತಗಳಂತರದಿಂದ ಗೆಲ್ಲಲಿದ್ದಾರೆ ಎಂದು ಗುಜರಾತ್ ಇಂಧನ ಖಾತೆ ಸಚಿವ ಸೌರಭ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ. 
 
ವಡೋದರದಲ್ಲಿ  ಬಹುಸಂಖ್ಯೆಯ ಮತ ಸಿಗುವ ಭರವಸೆ ಇದೆ. ಅವರ ಗೆಲುವಿನ ಅಂತರ 5 ಲಕ್ಷಕ್ಕಿಂತ ಹೆಚ್ಚಿರಲಿದೆ ಎಂದು ಕ್ಷೇತ್ರದಲ್ಲಿ ಮೋದಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಪಟೇಲ್ ಹೇಳಿದ್ದಾರೆ. ಅಕೋಟಾದಿಂದ ವಿಧಾನಸಭೆಯನ್ನು ಪ್ರತಿನಿಧಿಸುತ್ತಿರುವ ಅವರು, ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ದಿನದಿಂದ ವಡೋದರಾದಲ್ಲಿ ಬೀಡು ಬಿಟ್ಟಿದ್ದಾರೆ.
 
ದೇಶದ ಸಂಸದೀಯ ಚುನಾವಣಾ ಇತಿಹಾಸದಲ್ಲಿ ಪ್ರಥಮ ಬಾರಿ ವಡೋದರಾದಲ್ಲಿ ಪ್ರಧಾನಮಂತ್ರಿ ಪದದ ಅಭ್ಯರ್ಥಿಯೊಬ್ಬರು ಇಷ್ಟು ಮತಗಳ ಅಂತರದಿಂದ ಗೆಲುವನ್ನು ದಾಖಲಿಸಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
 
ವಡೋದರಾದಲ್ಲಿ ಈ ಬಾರಿ ದಾಖಲೆಯ 70.57 ಪ್ರತಿಶತ ಮತದಾನವಾಗಿದೆ. 1951ರ ನಂತರ ಇದು ಸರ್ವಾಧಿಕವಾಗಿದೆ.ಜನರು ಸರತಿಸಾಲಿನಲ್ಲಿ ಮತದಾನ ಮಾಡುತ್ತಿರುವುದನ್ನು ನೋಡಿದಾಗ ಜನರು ಮೋದಿಯ ಪರ ಮತದಾನಕ್ಕೆ ಉತ್ಸುಕರಾಗಿದ್ದರು ಎಂಬುದು ವ್ಯಕ್ತವಾಗುತ್ತಿತ್ತು. ಯಾಕೆಂದರೆ 1980 ರಿಂದ ಈ ಕ್ಷೇತ್ರ ಮೋದಿಯವರ ಕರ್ಮಭೂಮಿಯಾಗಿದೆ ಎಂದು ಪಟೇಲ್ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ