62 ನೇ ಜನ್ಮದಿನವನ್ನಾಚರಿಸಿಕೊಂಡ ಜೇಟ್ಲಿಗೆ ಮೋದಿ ಶುಭಾಶಯ

ಭಾನುವಾರ, 28 ಡಿಸೆಂಬರ್ 2014 (15:39 IST)
ಇಂದು ತಮ್ಮ 62 ನೇ ಜನ್ಮದಿನವನ್ನಾಚರಿಸಿಕೊಂಡ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ.  ಉತ್ತಮ ಆರೋಗ್ಯದಿಂದ ಕೂಡಿದ ದೀರ್ಘ ಜೀವನ ನಿಮ್ಮದಾಗಲಿ ಎಂದು ಮೋದಿ ಹಾರೈಸಿದ್ದಾರೆ. 
 
"ಆತ್ಮೀಯ ಸ್ನೇಹಿತ ಮತ್ತು ಗೌರವಯುತ ಸಹೋದ್ಯೋಗಿಯಾದ ತಮಗೆ ಜನ್ಮದಿನದ ಶುಭಾಶಯಗಳು,ಅರುಣ್ ಜೇಟ್ಲಿ . ದೇವರು ನಿಮಗೆ ಆರೋಗ್ಯಪೂರ್ಣವಾದ ದೀರ್ಘ ಆಯುಷ್ಯವನ್ನು ಕರುಣಿಸಲಿ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. 
 
ಹಣಕಾಸು ಖಾತೆ ಜತೆ ಕಾರ್ಪೊರೇಟ್ ವ್ಯವಹಾರ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಜೇಟ್ಲಿ ರಾಷ್ಟ್ರ ರಾಜಧಾನಿಯಲ್ಲಿ ಡಿಸೆಂಬರ್ 28, 1952 ರಂದು ಜನಿಸಿದ್ದರು.

ವೆಬ್ದುನಿಯಾವನ್ನು ಓದಿ