ದಲಿತರನ್ನು ಓಲೈಸಲು ಮೋದಿ ಯತ್ನ

ಬುಧವಾರ, 3 ಫೆಬ್ರವರಿ 2016 (16:54 IST)
ತಮಿಳುನಾಡಿನಲ್ಲಿ ನಿನ್ನೆ ಚುನಾವಣಾ ಪೂರ್ವ ಪ್ರಚಾರವನ್ನು ಆರಂಭಿಸಿದ್ದ ಪ್ರಧಾನಿ ಮೋದಿ ಎಲ್ಲಿಯವರೆಗೆ ಅಂಬೇಡ್ಕರ್‌ ಅವರ ಹೆಸರು ಇರುತ್ತದೋ ಅಲ್ಲಿಯವರೆಗೆ ದಲಿತರಿಗೆ ಮೀಸಲಾತಿ ಮುಂದುವರಿಯಲಿದೆ’ ಎಂದು ಹೇಳುವ ಮೂಲಕ ದಲಿತರನ್ನು  ಓಲೈಸಲು ಪ್ರಯತ್ನಿಸಿದ್ದಾರೆ.

 
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೊಯಿಮತ್ತೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ, ಅಂಬೇಡ್ಕರ್ ಅವರ ನೆನಪಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಹಲವು ಪಕ್ಷಗಳು ಭಯಗೊಂಡಿವೆ. ತಮ್ಮ ಆಸ್ತಿ ಎಂದುಕೊಂಡಿದ್ದ ದಲಿತರ ಮತಗಳು ತಮ್ಮ ಆಸ್ತಿ ಎಂದುಕೊಂಡಿದ್ದವು. ಬಿಜೆಪಿ ಅಂಬೇಡ್ಕರ್ ಅವರನ್ನು ಹೊಗಳುತ್ತಿದ್ದಂತೆ ಅವರು ಮೋದಿ ಸರ್ಕಾರ ದಲಿತ ಮತ್ತು ದೀನರ ವಿರುದ್ಧ ಎಂದು ಸುಳ್ಳು ಪ್ರಚಾರವನ್ನು ಪ್ರಾರಂಭಿಸಿದರು. ದಲಿತ ಮೀಸಲಾತಿ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
 
ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಬಳಿಕ ದಲಿತರನ್ನು ತುಳಿಯಲಾಗುತ್ತಿದೆ ಎಂಬ ಆಕ್ರೋಶಯುಕ್ತ ಚರ್ಚೆಗಳು ಹೆಚ್ಚಿರುವುದರ ಹಿನ್ನೆಲೆಯಲ್ಲಿ ಸಹ ಮೋದಿಯವರು ತಮ್ಮ ಸರ್ಕಾರ ದಲಿತರ ವಿರೋಧಿಯಲ್ಲ ಎಂಬುದನ್ನು ಒತ್ತಿ ಹೇಳಲು ಪ್ರಯತ್ನಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ