10 ಸಾವಿರ ಬಾಲಕಿಯರಿಗೆ 200 ಕೋಟಿ ದೇಣಿಗೆ ನೀಡಿದ ಮೋದಿ ಬೆಂಬಲಿಗ ಲಾವಜಿ

ಮಂಗಳವಾರ, 23 ಫೆಬ್ರವರಿ 2016 (19:24 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಟ್ ಖರೀದಿಸಿದ್ದ ಉದ್ಯಮಿ ಲಾವಜಿಭಾಯಿ ಬಾದಶಾಹ್, ದೇಶಾದ್ಯಂತ 10000 ಬಾಲಕಿಯರಿಗೆ ತಲಾ 2 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.  
 
ಸೂರತ್ ವಜ್ರ ವ್ಯಾಪಾರಿ, ಬಿಲ್ಡರ್, ಖಾಸಗಿ ವಿಮಾನಯಾನ ಸಂಸ್ಥೆಯ ಮಾಲೀಕರಾದ ಲಾವಜಿಭಾಯಿ ಪಟೇಲ್, ವೃಂದಾವನದ ವಾತ್ಸಲ್ಯ ಗ್ರಾಮಕ್ಕೆ ಭೇಟಿ ನೀಡಿದಾಗ ಅಚ್ಚರಿಯ ಘೋಷಣೆ ಮಾಡಿದ್ದಾರೆ. 
 
ಸೂರತ್‌ನಲ್ಲಿ ಮಾರ್ಚ್ 13 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ದೇಶಾದ್ಯಂತ 10 ಸಾವಿರ ಬಾಲಕಿಯರ ಪೋಷಕರನ್ನು ಆಯ್ಕೆ ಮಾಡಿ ಬಾಲಕಿಯರ ವಿವಾಹಕ್ಕಾಗಿ ಪ್ರತಿಯೊಂದು ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಗುವುದು. ಇದರಿಂದಾಗಿ ಬಾಲಕಿಯರ ವಿವಾಹದ ಚಿಂತೆ ಪೋಷಕರನ್ನು ಕಾಡುವುದಿಲ್ಲ ಎಂದು ತಿಳಿಸಿದ್ದಾರೆ.
   
ಬಡಮಕ್ಕಳ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ವಾತ್ಸಲ್ಯ ಗ್ರಾಮ ಸಂಸ್ಥೆಯ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಹಾಜರಾಗಿದ್ದ ಲಾವಜಿ ಪಟೇಲ್, ಸಾಧ್ವಿ ರಿತಂಬರಾ ಕಾರ್ಯಕ್ಷಮತೆ ಕಂಡು ಸ್ಪೂರ್ತಿಗೊಂಡಿದ್ದೇನೆ. ಕೇಂದ್ರ ಸರಕಾರ ಘೋಷಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮಕ್ಕೆ 200 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.  
 
ಲಾವಜಿ ಪಟೇಲ್ ಬಾದ್‌ಶಾ, ಇದು ಮೊದಲ ಬಾರಿಗೆ ನೀಡುತ್ತಿರುವ ದೇಣಿಗೆಯಲ್ಲ. ಕಳೆದ ವರ್ಷ ಪಟಿದಾರ್ ಸಮುದಾಯದ ಕುಟುಂಬಗಳ 5 ಸಾವಿರ ನವಜಾತ ಶಿಶುಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳ ಬಾಂಡ್ ನೀಡಿದ್ದರು. ಬಾಲಕಿಯರು 21 ವರ್ಷದವರಾದಾಗ 2 ಕೋಟಿ ರೂಪಾಯಿ ಪ್ರೀಮಿಯಂ ಹಣವನ್ನು ಪಡೆಯುತ್ತಾರೆ.   

ವೆಬ್ದುನಿಯಾವನ್ನು ಓದಿ