ಮೊಗಾ ದುರಂತ: ಮೃತ ಬಾಲಕಿಯ ಅಂತ್ಯಸಂಸ್ಕಾರ

ಸೋಮವಾರ, 4 ಮೇ 2015 (14:41 IST)
ಪಂಜಾಬ್ ಮುಖ್ಯಮಂತ್ರಿ ಬಾದಲ್ ಅವರ ಕುಟುಂಬದ ಒಡೆತನದ ಬಸ್ ಒಂದರಲ್ಲಿ ಲೈಂಗಿಕ ಹಿಂಸೆಗೊಳಗಾಗಿ ನಂತರ ಬಸ್‌ನಿಂದ ದೂಡಲ್ಪಟ್ಟು ಮೃತಪಟ್ಟ ಬಾಲಕಿಯ ಅಂತ್ಯಸಂಸ್ಕಾರವನ್ನು ಭಾನುವಾರ ನಡೆಸಲಾಯಿತು. 

ಬಸ್ ಪರವಾನಿಗೆಯನ್ನು ರದ್ದು ಪಡಿಸಬೇಕು ಮತ್ತು  ಬಸ್ ಮಾಲೀಕರನ್ನು ಬಂಧಿಸುವವರೆಗೂ ಶವ ಸಂಸ್ಕಾರ ಮಾಡಲಾರೆವು ಎಂದು ಹಠ ಹಿಡಿದು ಬಾಲಕಿಯ ಪೋಷಕರು ಪ್ರತಿಭಟನೆ ನಡೆಸಿದ್ದರು. ಮೃತಳ ಶವ ಪರೀಕ್ಷೆಗೂ ಆಕೆಯ ತಂದೆ ಅನುಮತಿ ನೀಡಿರಲಿಲ್ಲ. 
 
ಸೋಮವಾರ ಮೊಗಾ ಬಂದ್‌ನ್ನು ಘೋಷಿಸಿದ್ದರಿಂದ ಎಚ್ಚೆತ್ತುಕೊಂಡ ಸರಕಾರ ಬಾಲಕಿಯ ಕುಟುಂಬದವರ ಬೇಡಿಕೆಗಳನ್ನು ಈಡೇರಿಸಿದ್ದು 30 ಲಕ್ಷ ರೂಪಾಯಿ ಪರಿಹಾರ ನೀಡಿದೆ. 
 
ಪ್ರಕರಣದ ಕುರಿತು ಪಂಜಾಬ್ ಹೈಕೋರ್ಟ್ ಸೋಮವಾರ ವಿಚಾರಣೆಯನ್ನು ಪ್ರಾರಂಭಿಸಲಿದೆ. 

ವೆಬ್ದುನಿಯಾವನ್ನು ಓದಿ