ಹಿಂದೂ ರಾಷ್ಟ್ರ ನಿರ್ಮಾಣ: ಭಾಗವತ್ ಹೇಳಿಕೆಗೆ ಸಿಂಘಾಲ್ ಸಹಮತ

ಭಾನುವಾರ, 21 ಡಿಸೆಂಬರ್ 2014 (14:15 IST)
ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ  ವಿಶ್ವ ಹಿಂದು ಪರಿಷದ್  ಅಧ್ಯಕ್ಷ ಅಶೋಕ್ ಸಿಂಘಾಲ್  ಸಹಮತ ವ್ಯಕ್ತಪಡಿಸಿದ್ದಾರೆ.  ಬಲವಂತದ ಮತಾಂತರ ಮಾಡುವುದು ತಪ್ಪು. ಮತಾಂತರ ವಿರೋಧಿ ಕಾಯ್ದೆ ಜಾರಿಯಾಗಬೇಕಾಗಿದೆ.

ಕಸಿದುಕೊಂಡು ಹೋಗಿರುವ ಸ್ವತ್ತುಗಳನ್ನು ಮರಳಿ ತರುತ್ತೇವೆ ಎಂದು ಬಾಗವತ್  ಹೇಳಿದ್ದರು. ಕೊಲ್ಕತ್ತಾದಲ್ಲಿ ಸಾರ್ವಜನಿಕ ರ‌್ಯಾಲಿಯಲ್ಲಿ ಭಾಷಣ ಮಾಡಿದ ಮೋಹನ್ ಭಾಗವತ್ ಹೆದರಿಕೊಳ್ಳುವ ಅಗತ್ಯವಿಲ್ಲ. ನಾವು ನಮ್ಮ ರಾಷ್ಟ್ರದಲ್ಲಿದ್ದೇವೆ. ನಾವು ಅತಿಕ್ರಮಣಕಾರರಲ್ಲ. ಇದು ನಮ್ಮ ಹಿಂದೂ ರಾಷ್ಟ್ರ. ಹಿಂದೂಗಳ ಜಾಗೃತಿ ಬಗ್ಗೆ ಯಾರೂ ಹೆದರಬಾರದು ಎಂದು ಹೇಳಿದ್ದರು.

ಭಾಗವತ್ ಹೇಳಿಕೆಗೆ ಧ್ವನಿಗೂಡಿಸಿರುವ ಸಿಂಘಾಲ್,  ನಾವು ಮರಳಿಹೋದ ಗತವೈಭವವನ್ನು ವಾಪಸ್ ತರಬೇಕಿದೆ. ನಮ್ಮ ದಾರಿತಪ್ಪಿದ ಸೋದರರನ್ನು ಮರಳಿ ತರಬೇಕಿದೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದು ಎಂದರು..

ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಸಿಂಘಾಲ್, ಕಳೆದ 50ವರ್ಷಗಳಿಂದ ನಮ್ಮ ಹೋರಾಟದಿಂದಾಗಿ ಹಿಂದೂಗಳು 800ವರ್ಷಗಳ ಬಳಿಕ ದೆಹಲಿಯ ಕಳೆದುಹೋದ ಸಾಮ್ರಾಜ್ಯವನ್ನು ಮತ್ತೆಗಳಿಸಿದ್ದಾರೆ ಎಂದು ಹೇಳಿದರು. 

ಘರ್ ವಾಪಸಿ ಹೆಸರಿನಲ್ಲಿ ಉತ್ತರಭಾರತದಲ್ಲಿ ನಡೆಯುತ್ತಿರುವ ಮತಾಂತರಕ್ಕೆ ಮೋದಿ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.  ಆರ್‌ಎಸ್‌ಎಸ್ ಮುಖಂಡರಿಗೆ ಈ ಕುರಿತು ಮೋದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ