ಅನೇಕ ಮುಸ್ಲಿಮರು ಭಯೋತ್ಪಾದನೆ ಸಮರ್ಥಿಸಿಕೊಳ್ಳುತ್ತಾರೆ: ತಸ್ಲೀಮಾ ನಸ್ರೀನ್

ಗುರುವಾರ, 24 ಮಾರ್ಚ್ 2016 (02:02 IST)
ಬೆಲ್ಜಿಯಂನಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಹೆಸರಾಂತ ಲೇಖಕಿ ಮತ್ತು ಕಾರ್ಯಕರ್ತೆ ತಸ್ಲೀಮಾ ನಸ್ರೀನ್ ಇಸ್ಲಾಮಿಸ್ಟ್‌ಗಳು ಇಸ್ಲಾಮೇತರ ಜನರನ್ನು ಪ್ರತಿಯೊಬ್ಬರನ್ನೂ ಕೊಲ್ಲುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  ಇಸ್ಲಾಮ್‌ನಲ್ಲಿ ತಾರತಮ್ಯದ ಬಗ್ಗೆ ತಮ್ಮ ಚಿಂತನೆಗಳನ್ನು ಗಟ್ಟಿಧ್ವನಿಯಲ್ಲಿ ಹೇಳಿದ್ದ ತಸ್ಲೀಮಾ ಟ್ವಿಟರ್‌ನಲ್ಲಿ ಬರೆಯುತ್ತಾ,  ಇಸ್ಲಾಮಿಸ್ಟ್‌ಗಳು ಎಲ್ಲಾ ಇಸ್ಲಾಮೇತರ ಜನರನ್ನು ಕೊಲ್ಲುತ್ತಾರೆ. ಮಾನಸಿಕ ಸ್ವಸ್ಥರಾದ ನಮ್ಮಂತ ಜನರು ಎಲ್ಲೂ ಸುರಕ್ಷಿತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇಸ್ಲಾಮಿಸ್ಟ್ ಭಯೋತ್ಪಾದಕರ ಭಯೋತ್ಪಾದಕ ಕೃತ್ಯಗಳನ್ನು ಬಹುತೇಕ ಮುಸ್ಲಿಮರು ಸಮರ್ಥಿಸಿಕೊಳ್ಳುತ್ತಾರೆ. ಅವರು ಪೆಲೆಸ್ಟೀನಿಯನ್ ಮುಸ್ಲಿಮರ ಸ್ಥಿತಿಗೆ ಗೋಳಿಡುತ್ತಾರೆ. ಆದರೆ ಮುಸ್ಲಿಮೇತರರ ಬಗ್ಗೆ ಯಾವುದೇ ಕರುಣೆ ಇಲ್ಲ ಎಂದು ಕಟುವಾಗಿ ಟೀಕಿಸಿದರು. 
 
 ಭಯೋತ್ಪಾದಕರನ್ನು ಕುರಿತು ಆಕ್ರೋಶದಿಂದ ಹೇಳಿದ ಅವರು ಅವರು ಎಷ್ಟೊಂದು ದ್ವೇಷವನ್ನು ತುಂಬಿಕೊಂಡಿದ್ದಾರೆ. ಉಳಿದವರನ್ನು ಕೊಲ್ಲುವುದಕ್ಕೆ ತಮ್ಮ ಆತ್ಮಾಹುತಿಗೂ ಹಿಂಜರಿಯುವುದಿಲ್ಲ. ಇಸ್ಲಾಮಿಕ್ ಭಯೋತ್ಪಾದಕರು ಎಂಬ ಪದವನ್ನು ಬಳಸದ ರಾಜಕಾರಣಿಗಳು,ಮಾಧ್ಯಮದ ವರ್ತನೆಯನ್ನು ಕೂಡ ಅವರು ಟೀಕಿಸಿದರು. ಇಸ್ಲಾಮಿಕ್ ಭಯೋತ್ಪಾದಕರನ್ನು ಬರೀ ಭಯೋತ್ಪಾದಕರು ಎಂದು ಕರೆಯುವುದೇಕೆ, ಇಸ್ಲಾಮಿಕ್ ಎಂದು ಹೇಳಲು ನಾಚಿಕೆಯಾಗುತ್ತದೆಯೇ ಎಂದು ಪ್ರಶ್ನಿಸಿದರು. 
 

ವೆಬ್ದುನಿಯಾವನ್ನು ಓದಿ