ಜುಲೈ 1 ರಂದು ಹುಟ್ಟಿದ ಮಗುವಿಗೆ ‘ಜಿಎಸ್ ಟಿ’ ಹೆಸರಿಟ್ಟ ತಾಯಿ!

ಸೋಮವಾರ, 3 ಜುಲೈ 2017 (10:36 IST)
ಜೈಪುರ: ಜುಲೈ 1 ರಿಂದ ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಯಾಗಿದೆ. ಈ ಐತಿಹಾಸಿಕ ಕ್ಷಣವನ್ನು ಸರ್ಕಾರ ಮಧ್ಯರಾತ್ರಿ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಿದೆ. ಆದರೆ ಇಲ್ಲೊಬ್ಬ ಮಹಾತಾಯಿ ಏನು ಮಾಡಿದ್ದಾಳೆ ಗೊತ್ತೇ?

 
ಜುಲೈ 1 ರಂದು ಮಧ್ಯರಾತ್ರಿ 12.02 ಕ್ಕೆ ಹುಟ್ಟಿದ ತನ್ನ ಗಂಡು ಮಗುವಿಗೆ ‘ಜಿಎಸ್ ಟಿ’ ಎಂದು ನಾಮಕರಣ ಮಾಡಿದ್ದಾಳೆ. ಇದು ನಡೆದಿರುವುದು ರಾಜಸ್ಥಾನದಲ್ಲಿ. ಇದನ್ನು ಸ್ವತಃ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಜೂನ್ 30 ರ ಮಧ್ಯರಾತ್ರಿ ಕೇಂದ್ರ ಸರ್ಕಾರ ಜಿಎಸ್ ಟಿ ತೆರಿಗೆ ಪದ್ಧತಿಯನ್ನು ಐತಿಹಾಸಿಕ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿತ್ತು. ಈ ಐತಿಹಾಸಿಕ ಗಳಿಗೆಯನ್ನು ಈ ಮಹಾತಾಯಿ ಮಗುವಿನ ಹೆಸರಿಟ್ಟು ಸ್ಮರಣೀಯವಾಗಿಸಿರುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ