ನಿತೀಶ್ ಕುಮಾರ್ ವಿರುದ್ಧ ಅಸಭ್ಯ ಪದ ಪ್ರಯೋಗ ಮಾಡಿದ ಬಿಜೆಪಿ

ಗುರುವಾರ, 3 ಸೆಪ್ಟಂಬರ್ 2015 (16:43 IST)
'ಎಂಪಿ ಬಿಜೆಪಿ@ಬಿಜೆಪಿ_ಎಂಪಿ' ಹೆಸರಿನಲ್ಲಿರುವ ಟ್ವಿಟರ್ ಖಾತೆಯಿಂದ ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರಿಗೆ ಅತಿ ತುಚ್ಛ ಪದಪ್ರಯೋಗ ಮಾಡಿ ನಿಂದಿಸಲಾಗಿದೆ. 
 
ಆದರೆ ಬಿಹಾರ ಮುಖ್ಯಮಂತ್ರಿ ವಿರುದ್ಧ ಅಸಭ್ಯ ಕಾಮೆಂಟ್ ಪೋಸ್ಟ್ ಮಾಡಲು ಬಳಸಿರುವ ಟ್ವಿಟರ್ ಖಾತೆ ನಕಲಿ ಎಂದು ಬಿಜೆಪಿ ಮೂಲಗಳು ವಾದಿಸುತ್ತಿವೆ. 
 
ಪತ್ರಕರ್ತರು, ಮಂತ್ರಿಗಳು ಸೇರಿದಂತೆ 416ಕ್ಕಿಂತಲೂ ಹೆಚ್ಚು ಫಾಲೋವರ್ಸ್ ಈ ಖಾತೆಗಿದ್ದಾರೆ.
 
ಅರುಣ್ ಜೇಟ್ಲಿ, ಉಮಾ ಭಾರತಿ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಮಧ್ಯಪ್ರದೇಶ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಮಣ್ ಸಿಂಗ್ ಅವರು ಸಹ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಅದು ತನಗೆ ಸೇರಿದ್ದಲ್ಲ ಎಂದು ವಾದಿಸುತ್ತಿದೆ. 
 
ಮತ್ತೊಂದು ಗಮನಾರ್ಹ ವಿಷಯವೇನೆಂದರೆ ಈ ಸುದ್ದಿ ಪ್ರಕಟವಾಗಿದ್ದರೂ ಬಿಜೆಪಿ  ನಕಲಿ ಎಂದು ಹೇಳಲಾಗುತ್ತಿರುವ ಖಾತೆಯ ವಿರುದ್ಧ ಯಾವುದೇ ಕ್ರಮ ಅಥವಾ ತನಿಖೆಯನ್ನು ಸಹ ಕೈಗೊಂಡಿಲ್ಲ. 

ವೆಬ್ದುನಿಯಾವನ್ನು ಓದಿ