ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ: ಮಧ್ಯಪ್ರದೇಶ ಸಿಎಂ ಚೌಹಾನ್

ಶುಕ್ರವಾರ, 31 ಜುಲೈ 2015 (18:39 IST)
ವ್ಯಾಪಂ ಹಗರಣದಲ್ಲಿ ಸಿಲುಕಿ ಬಿಜೆಪಿ ಹೈಕಮಾಂಡ್‌ನಿಂದ ಕೆಂಗೆಣ್ಣಿಗೆ ಗುರಿಯಾಗಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಿಸುವುದಾಗಿ ಹೇಳಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಗೃಹ ಸಚಿವ ಬಾಬುಲಾಲ್ ಗೌರ್ ಅವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದರು.
 
ಬಾಬುಲಾಲ್ ಗೌರ್‌ರನ್ನು ಸಂಪುಟದಿಂದ ಕೈ ಬಿಡಲಾಗುತ್ತಿದೆ ಎನ್ನುವ ವರದಿಗಳು ಹರಡಿರುವ ಬಗ್ಗೆ  ಸುದ್ದಿಗಾರರು ಕೇಳಿದಾಗ, ಅವರನ್ನು ನೀವು ಯಾಕೆ ತೆಗೆಯಲು ಬಯಸುತ್ತೀರಿ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.
 
ವ್ಯಾಪಂ ಹಗರಣ ಸೇರಿದಂತೆ ಹಲವಾರು ವಿಷಯಗಳಲ್ಲಿ ಸಿಎಂ ಚೌಹಾನ್ ಮತ್ತು ಗೌರ್ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಎಂಮದು ಪಕ್ಷದ ಮೂಲಗಳು ತಿಳಿಸಿವೆ.
 
ಕಳೆದ 2005 ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಾಬುಲಾಲ್ ಗೌರ್‌ರನ್ನು ಮುಖ್ಯಮಂತ್ರಿ ಹುದ್ದೆ.ಯಿಂದ ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸೇಡು ರಾಜಕೀಯವಾಗಿ ಪರಿವರತನೆಗೊಂಡಿದೆ.
 
ಪಕ್ಷದ ಮೂಲಗಳ ಪ್ರಕಾರ, ಕಳೆದ 2008ರ ವಿಧಾನಸಭೆ ಚುನಾವಣೆಯಲ್ಲಿ ಬಾಬುಲಾಲ್ ಗೌರ್‌ಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿತ್ತು. ಆದರೆ, ಆಡ್ವಾಣಿಯವರೊಂದಿಗೆ ಉತತ್ಮ ಸಂಬಂಧ ಹೊಂದಿದ್ದರಿಂದ ಗೌರ್ ಟಿಕೆಟ್ ಪಡೆದು ಗೆಲುವು ಸಾಧಿಸಿದರು.
 
ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಭೋಪಾಲ್‌ನ ಗೋವಿಂದ್‌ಪುರ್ ವಿಧಾನಸಬೆ ಕ್ಷೇತ್ರದಿಂದ ಟಿಕೆಟ್ ದೊರೆತು ದಾಖಲೆಯ. ಹತ್ತನೇ ಬಾರಿಗೆ ಜಯಭೇರಿ ಬಾರಿಸಿದರು.
 

ವೆಬ್ದುನಿಯಾವನ್ನು ಓದಿ