ಬುಡಕಟ್ಟು ಜನರೊಡನೆ ಬೆರೆತು ನೃತ್ಯಮಾಡಿದ ಸಚಿವ

ಶನಿವಾರ, 18 ಏಪ್ರಿಲ್ 2015 (17:11 IST)
ತಮ್ಮ ಸಂಸ್ಕೃತಿ ಪ್ರದರ್ಶನ, ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ತಮ್ಮ ಹಕ್ಕುಗಳ ರಕ್ಷಣೆ ಖಚಿತಪಡಿಸಿಕೊಳ್ಳಲು ಬುಡಕಟ್ಟು ಜನಾಂಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಧ್ಯಪ್ರದೇಶದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ಸಚಿವ, ವಿಜಯ್ ಶಾ, ಗುಡ್ಡಗಾಡು ಜನಾಂಗದವರ ಸಂಸ್ಕೃತಿಯಂತೆ ಕಾಲು ಮಿಲಾಯಿಸಿದರು. 

ಮಧ್ಯಪ್ರದೇಶದ ಮಾಂಡ್ಲಾ ಪ್ರವಾಸೋದ್ಯಮ ಪ್ರಚಾರ ಕೌನ್ಸಿಲ್ ಆಯೋಜಿಸಿದ್ದ ಎರಡು ದಿನಗಳ ಸಮಾರಂಭದಲ್ಲಿ ಸಚಿವ  ಆದಿವಾಸಿಗಳು ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನೃತ್ಯ ಮಾಡಿದ ಸಚಿವರು ಬುಡಕಟ್ಟಿನವರು ಸಿದ್ಧ ಪಡಿಸಿದ್ದ ಆಹಾರದ ರುಚಿಯನ್ನು ಸಹ ನೋಡಿದರು.
 
ಕಾರ್ಯಕ್ರಮದ ಎರಡನೇ ದಿನ  ಮಧ್ಯಪ್ರದೇಶದ ಮುಖ್ಯಮಂತ್ರಿಯವರು ಭಾಗವಹಿಸಬೇಕಿತ್ತು. ಆದರೆ ತುರ್ತು ಕೆಲಸವಿದ್ದರಿಂದ ಸಚಿವ ಶಾರವರನ್ನು ಕಳುಹಿಸಿಕೊಟ್ಟಿದ್ದರು. 
 
ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಶ್ರೀಮಂತ ಗೊಂಡ ಇತಿಹಾಸ ಮತ್ತು ಸಂಸ್ಕೃತಿ ನೋಡಲು ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಆಹ್ವಾನಿಸುತ್ತೇವೆ ಎಂದರಲ್ಲದೇ, ಆದಷ್ಟು ಬೇಗ ಟ್ರೈಬಲ್ ಚಾನೆಲ್ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ