ಸಿಂಹ, ಹುಲಿಗಳನ್ನು ಮನೆಯಲ್ಲಿ ಸಾಕಲು ಕಾನೂನು ರೂಪಿಸಬೇಕು: ಬಿಜೆಪಿ ಸಚಿವ

ಸೋಮವಾರ, 2 ಮಾರ್ಚ್ 2015 (15:07 IST)
ಜನರು ಬೆಕ್ಕು ಮತ್ತು ನಾಯಿಗಳನ್ನು ಸಾಕಲು ಅನುವು ಮಾಡಿಕೊಟ್ಟಂತೆ ಸಿಂಹ ಮತ್ತು ಹುಲಿಗಳನ್ನು ಸಾಕಲು ಕೇಂದ್ರ ಸರಕಾರ ಅನುಮತಿ ನೀಡಬೇಕು ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವರೊಬ್ಬರು ಆಘಾತಕಾರಿ ಸಲಹೆ ನೀಡಿದ್ದಾರೆ. 
ಮಧ್ಯಪ್ರದೇಶದ ತೋಟಗಾರಿಕೆ ಮತ್ತು ಆಹಾರ ಸಂಸ್ಕರಣ ಖಾತೆ ಸಚಿವರಾದ ಕುಸುಮ್ ಮೆಹದೆಲೆ ಮಾತನಾಡಿ, ಸಿಂಹ ಮತ್ತು ಹುಲಿಗಳನ್ನು ಸಾಕುವ ಬಗ್ಗೆ ಅನುಮತಿ ನೀಡುವಂತೆ ಕೋರಿ ಈಗಾಗಲೇ ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅನುಮತಿ ದೊರೆತಲ್ಲಿ ಆಫ್ರಿಕಾ ಮತ್ತು ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರವಾದ ಥೈಲೆಂಡ್‌ನಂತೆ ಸಿಂಹ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.  
 
ಹುಲಿ ಮತ್ತು ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಅನೇಕ ಯೋಜನೆಗಳಿಗಾಗಿ ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಆದರೆ, ಸಿಂಹ ಮತ್ತು ಹುಲಿಗಳ ಸಂಖ್ಯೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಆಫ್ರಿಕಾ ಮತ್ತು ದಕ್ಷಿಣ-ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿರುವಂತೆ ಸಿಂಹ ಮತ್ತು ಹುಲಿಗಳನ್ನು ಸಾಕಲು ಕಾನೂನು ಜಾರಿಗೆ ತರಬೇಕು. ಈ ರಾಷ್ಟ್ರಗಳು ಮನೆಯಲ್ಲಿ ಸಿಂಹ ಮತ್ತು ಹುಲಿಗಳನ್ನು ಸಾಕಲು ಅನುಮತಿ ನೀಡಿರುವುದು ಅವುಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಉದಾಹರಿಸಿದರು.
 
ಕಾನೂನು ಜಾರಿಗೆ ತರಲು ಅವಕಾಶವಿದ್ದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವೆ ಕುಸಮ್ ಮಹಾದೆಲೆ ಅರಣ್ಯ ಖಾತೆ ಸಚಿವ ಗೌರಿಶಂಕರ್ ಶೇಜ್‌ವಾರ್‌ಗೆ ಪತ್ರ ಬರೆದಿದ್ದಾರೆ. 
 

ವೆಬ್ದುನಿಯಾವನ್ನು ಓದಿ