ಯುವತಿಯರನ್ನು ಅಪಹರಿಸಿ ನಿರಂತರ 15 ದಿನ ಅತ್ಯಾಚಾರ ನಡೆಸಿದ 20 ಜನ

ಗುರುವಾರ, 16 ಏಪ್ರಿಲ್ 2015 (18:28 IST)
ಖಂಡಾವಾ ಜಿಲ್ಲೆಯ ನಿವಾಸಿಗಳಾದ ಇಬ್ಬರು ಯುವತಿಯರನ್ನು ಅಪಹರಿಸಿ ಅವರ ಮೇಲೆ 15 ದಿನಗಳ ಕಾಲ 20 ಆರೋಪಿಗಳು ನಿರಂತರ ಅತ್ಯಾಚಾರ ನಡೆಸಿದ ಕರಾಳ ಘಟನೆ ಬೆಳಕಿಗೆ ಬಂದಿದೆ.

 
ಅಪಹರಿಸಿದ ಇಬ್ಬರು ಯುವತಿಯರನ್ನು ಕೋಣೆಯೊಂದರಲ್ಲಿ ಕೂಡಿಟ್ಟ 20 ಜನ ಕಿರಾತಕರು ಅವರ ಮೇಲೆ ನಿರಂತರವಾಗಿ 15 ದಿನ ಅತ್ಯಾಚಾರ ನಡೆಸಿದ್ದಾರೆ. ಅವರ ಕಬಂಧ ಬಾಹುಗಳಿಂದ ತಪ್ಪಿಸಿಕೊಂಡು ಬರಲು ಯಶಸ್ವಿಯಾದ ಪೀಡಿತರು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. 
 
ಯುವತಿಯರ ದೂರಿನ ಆಧಾರದ ಮೇಲೆ ರೇವಾ ಜಿಲ್ಲೆಯಲ್ಲಿ ರೈಡ್ ನಡೆಸಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. 
 
ಕಳೆದ 15 ದಿನಗಳ ಹಿಂದೆ ಮನೆಯಿಂದ ಪರಾರಿಯಾಗಿದ್ದ ಯುವತಿಯರಿಗೆ ಬಸ್‌ನಲ್ಲಿ ಪರಿಚಿತನಾದ ಒಬ್ಬ ವ್ಯಕ್ತಿ  ಕೆಲಸ ಕೊಡಿಸುವ ನೆಪ ಹೇಳಿ ಕರೆದೊಯ್ದ ಮತ್ತು ಅವರನ್ನು ಹೊಶಂದಾಬಾದ್‌ನ ಮನೆಯೊಂದರಲ್ಲಿ ಕೂಡಿ ಹಾಕಿದ. ಅಲ್ಲಿ ಅವರ ಮೇಲೆ 20 ಜನ ಅತ್ಯಾಚಾರ ನಡೆಸಿದರು.
 
ಅಲ್ಲಿಂದ ಯುವತಿಯರನ್ನು ಭೋಪಾಲ್, ಜಬಲ್ಪುರ್, ರೇವಾಗಳಿಗೂ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲಾಯಿತು. ಒಂದು ದಿನ ಯುವತಿಯರನ್ನು ಕೂಡಿ ಹಾಕಿದ್ದ ಮನೆಯ  ಕದ ಮುಚ್ಚಲು ಆರೋಪಿಗಳು ಮರೆತರು. ಈ ಅವಕಾಶವನ್ನು ಬಳಸಿಕೊಂಡ ಯುವತಿಯರು ಅಲ್ಲಿಂದ ಪರಾರಿಯಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ