ಸಂಸದರು ಸಂಸತ್ತಿನಲ್ಲಿ ಸೀರೆ, ಫೇಶಿಯಲ್ ಬಗ್ಗೆ ಚರ್ಚಿಸುತ್ತಾರೆ: ಸುಪ್ರಿಯಾ ಸುಳೆ

ಶುಕ್ರವಾರ, 8 ಜನವರಿ 2016 (16:26 IST)
ಕಳೆದ ಕೆಲ ಅಧಿವೇಶನಗಳ ಕಲಾಪಗಳು ವಿಪಕ್ಷಗಳ ಕೋಲಾಹಲದಿಂದ ಸ್ಥಗಿತಗೊಂಡು ತೆರಿಗೆ ಪಾವತಿದಾರರ ಹಣ ಪೋಲಾಗುತ್ತಿರುವುದು ಜನತೆಯಲ್ಲಿ ಆಕ್ರೋಶ ಮೂಡಿಸಿರುವಂತೆಯೇ ಲೋಕಸಭಾ ಸಂಸದೆ ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ನೀಡಿದ ಹೇಳಿಕೆ  ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
 
ಮಹಿಳಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುಳೆ, ಗಂಭೀರ ವಿಷಯಘಳ ಬಗ್ಗೆಸ ಚರ್ಚೆ ನಡೆಯುತ್ತಿರುವಾಗಲು ಸಂಸದರು ಗಾಸಿಪ್‌ಗಳಲ್ಲಿ ಮುಳುಗಿರುತ್ತಾರೆ ಎಂದು ಹೇಳಿದ್ದಾರೆ.
 
ಗ್ಯಾಲರಿಗಳಲ್ಲಿ ಕುಳಿತು ನೋಡುವವರಿಗೆ ಸಂಸದರು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿರುತ್ತಾರೆ ಎಂದು ಭಾವಿಸುತ್ತಾರೆ. ಒಂದು ವೇಳೆ ಚೆನ್ನೈ ಸಂಸದರೊಂದಿಗೆ ನಾನು ಸಂಭಾಷಿಸುತ್ತಿದ್ದಲ್ಲಿ ನೀವು ಚೆನ್ನೈ ಮಳೆಯ ಪ್ರಕೋಪದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಭಾವಿಸುತ್ತೀರಿ. ನಾವು ಅಂತಹ ಯಾವುದೇ ಚರ್ಚೆ ಮಾಡುವುದಿಲ್ಲ. ನೀವು ಸೀರೆ ಎಲ್ಲಿ ಖರೀದಿಸಿದ್ದೀರಿ, ನಾನು ಎಲ್ಲಿ ಸೀರೆೋ ಖರೀದಿಸಿದೋ ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. 
 
ಒಂದು ವೇಳೆ, ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮಿಸಲಾತಿ ನೀಡಿದಲ್ಲಿ ಸಂಸತ್ತಿನಲ್ಲಿ ಬ್ಯೂಟಿ ಪಾರ್ಲರ್ ಮತ್ತು ಫೇಶಿಯಲ್ ಹಾಗೂ ಸೀರೆಗಳ ಬಗ್ಗೆ ಚರ್ಚೆ ನಡೆಯುತ್ತದೆ ಎಂದತು ಪುರು, ಸಂಸದರು  ನನ್ನನ್ನು ರೇಗಿಸುತ್ತಾರೆ. ನಮ್ಮ ಸೀರೆಗಳ ಬಗ್ಗೆ ಮಾತನಾಡುವ ನೀವು ದೇಶಕ್ಕಾಗಿ ಯಾವುದೇ ಒಳ್ಳೆಯ  ಕೆಲಸ ಮಾಡಿಲ್ಲ. ಆದ್ದರಿಂದ ಮಹಿಳೆಯರಿಗೆ ಅವಕಾಶ ಕೊಟ್ಟಲ್ಲಿ ತಪ್ಪಿಲ್ಲ ಎಂದು ನಾನು ತಿರುಗೇಟು ನೀಡುತ್ತೇನೆ ಎಂದು ಸಂಸದೆ ಸಪ್ರಿಯಾ ಸುಳೆ ತಿರುಗೇಟು ನೀಡಿದ್ದಾರೆ.  

ವೆಬ್ದುನಿಯಾವನ್ನು ಓದಿ