ಮತ್ತೆ ಪ್ರತಿಧ್ವನಿಸಿದ ಮುಫ್ತಿ ಹೇಳಿಕೆ ವಿವಾದ: ಸದನದಲ್ಲಿ ಗದ್ದಲ

ಮಂಗಳವಾರ, 3 ಮಾರ್ಚ್ 2015 (12:11 IST)
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಹೇಳಿಕೆ ವಿವಾದವು ಸದನದಲ್ಲಿ ಇಂದೂ ಕೂಡ ಪ್ರತಿಧ್ವನಿಸಿದ್ದು, ವಿಷಯ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಆಗಮಿಸಿ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.  
 
ಸದನದಲ್ಲಿ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದ ಪರಿಣಾಮ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ, ಸಿಎಂ ಮುಫ್ತಿ ಹೇಳಿಕೆಯನ್ನು ಸ್ವಾಗತಿಸುವ ಪ್ರಶ್ನೆಯೇ ಇಲ್ಲ. ಅವರ ಹೇಳಿಕೆಯನ್ನು ಸರ್ಕಾರ ಸಮರ್ಥಿಸಿಕೊಳ್ಳುವುದಿಲ್ಲ ಎಂದರು. ಆದರೆ ಸಚಿವರ ಮಾತಿಗೆ ಮನ್ನಣೆ ನೀಡದ ವಿರೋಧ ಪಕ್ಷಗಳ ಸದಸ್ಯರು, ಸ್ವತಃ ಪ್ರಧಾನಿ ಮೋದಿ ಅವರೇ ಸದನಕ್ಕೆ ಆಗಮಿಸಿ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಹೇಳಿಕೆ ದಾಖಲಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ಸದನದ ಕಲಾಪಕ್ಕೆ ಅಡ್ಡಿಯುಂಟಾಯಿತು. 
 
ಇನ್ನು ಸದನದಲ್ಲಿ ತೀವ್ರ ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಗದ್ದಲ ಮಾಡದಂತೆ ತಾಕೀತು ಮಾಡಿದರು. ಆದರೆ ಸಭಾಧ್ಯಕ್ಷರ ಮಾತಿಗೆ ಸೊಪ್ಪಾಕದ ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. 

ವೆಬ್ದುನಿಯಾವನ್ನು ಓದಿ