ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮೈತ್ರಿಗೆ ಎಸ್‌ಪಿ ಗುಡ್ ಬೈ

ಗುರುವಾರ, 3 ಸೆಪ್ಟಂಬರ್ 2015 (13:07 IST)
ಬಿಹಾರ್ ಚುನಾವಣೆ ಸಮೀಪಿಸುತ್ತಿದ್ದಂತೆ ಜನತಾ ಪರಿವಾರ ಮೈತ್ರಿಕೂಟಕ್ಕೆ ದೊಡ್ಡದೊಂದು ಹೊಡೆತ ಬಿದ್ದಿದೆ. ಮಹಾಮೈತ್ರಿಕೂಟದ ಸದಸ್ಯ ಪಕ್ಷಗಳಲ್ಲೊಂದಾದ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಮೈತ್ರಿಯನ್ನು ಕಳಚಿಕೊಂಡಿದೆ.

ಟಿಕೆಟ್ ಹಂಚಿಕೆಯಲ್ಲಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಮೈತ್ರಿಕೂಟದಿಂದ ಹೊರಬಿದ್ದಿದ್ದು, ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಲು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್  ನಿರ್ಧರಿಸಿದ್ದಾರೆ
 
ಬಿಹಾರದಲ್ಲಿ ಬಿಜೆಪಿಗೆ ಸೋಲುಣಿಸಲೇಬೇಕೆಂಬ ಉದ್ದೇಶದೊಂದಿಗೆ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ, ಆಡಳಿತಾರೂಢ ಜೆಡಿಯು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮಹಾ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು. 
 
ಚುನಾವಣೆ ದಿನಾಂಕ ಸದ್ಯದಲ್ಲಿಯೇ ಘೋಷಣೆಯಾಗುವ ನಿರೀಕ್ಷೆ ಇದೆ. 

ವೆಬ್ದುನಿಯಾವನ್ನು ಓದಿ