ಮಗನ ವಿರುದ್ಧವೇ ಕಣಕ್ಕಿಳಿಯುತ್ತಾರಂತೆ ಮುಲಾಯಂ

ಮಂಗಳವಾರ, 17 ಜನವರಿ 2017 (07:39 IST)
ಪಕ್ಷದ ಚಿಹ್ನೆ ಮಗ ಅಖಿಲೇಶ್ ಯಾದವ್ ಬಣದ ಪಾಲಾಗುತ್ತಿದ್ದಂತೆ ಕೆರಳಿರುವ ಮುಲಾಯಂ ಸಿಂಗ್ ಯಾದವ್ ತಮ್ಮ ಮಗನ ವಿರುದ್ಧವೇ ಕಣಕ್ಕಿಳಿಯುವುದಾಗಿ ಗುಡುಗಿದ್ದಾರೆ. 

ಭವಿಷ್ಯದಲ್ಲಿ ಒಳ್ಳೆಯದಾಗುವ ಯಾವ ಮಾತನ್ನು ಅಖಿಲೇಶ್ ಕೇಳುತ್ತಿಲ್ಲ. ಸಮಾಜವಾದಿ ಪಕ್ಷವನ್ನು ಮುಸ್ಲಿಂ ವಿರೋಧಿಯನ್ನಾಗಿಸಲಾಗಿದೆ. ಇದು ಚುನಾವಣೆಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ‘ನಾನು ಮುಸ್ಲಿಮರಿಗಾಗಿ ಬದುಕಿದ್ದೇನೆ. ಅವರಿಗಾಗಿ ಸಾಯಲೂ ಸಿದ್ಧ. ಮುಸ್ಲಿಂ ಸಮುದಾಯದ ಹಿತಾಸಕ್ತಿಗಾಗಿ ನಾನು ಅಖಿಲೇಶ್‌ ವಿರುದ್ಧ ಕಣಕ್ಕಿಳಿಯಲು ಸಿದ್ಧ’ ಎಂದಿದ್ದಾರೆ. 
 
ರಾಮಗೋಪಾಲ್ ಕುಣಿಸಿದಂತೆ ಅಖಿಲೇಶ್ ಯಾದವ್ ಕುಣಿಯುತ್ತಿದ್ದಾರೆ ಎಂದು ಆರೋಪಿಸಿರುವ ಮುಲಾಯಂ, ನನ್ನ ಮಾತನ್ನು ಕೇಳದಿದ್ದರೆ ಆತನ ವಿರುದ್ಧ ಸ್ಪರ್ಧಿಸುವುದು ನಿಶ್ಚಿತ ಎಂದಿದ್ದಾರೆ.
 
ಈ ನಡುವೆ ಪಕ್ಷದ ಚಿಹ್ನೆಯನ್ನು ತಮ್ಮದಾಗಿಸಿಕೊಂಡಿರವು ಅಖಿಲೇಶ್ ಬಣ  ಕಾಂಗ್ರೆಸ್ ಪಕ್ಷದ ಜತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ