ಪುತ್ರನ ಸರ್ಕಾರದ ವಿರುದ್ಧವೇ ಮುಲಾಯಂ ವಾಗ್ದಾಳಿ

ಭಾನುವಾರ, 23 ನವೆಂಬರ್ 2014 (13:47 IST)
ನಿನ್ನೆಯಷ್ಟೇ ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಮಾಜವಾದಿ ಪಕ್ಷದ ನಾಯಕ  ಮುಲಾಯಂ ಸಿಂಗ್ ಯಾದವ್  ತಮ್ಮ ಪುತ್ರ ಸಿಎಂ ಅಖಿಲೇಶ್ ಯಾದವ್ ಸರಕಾರದ ವಿರುದ್ಧವೇ ವಾಗ್ದಾಳಿಗೆ ಇಳಿದಿದ್ದಾರೆ.

ಲಖನೌನಲ್ಲಿ  ಲಖನೌ- ಆಗ್ರಾ ಎಕ್ಸಪ್ರೆಸ್ ವೇ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಅಭಿವೃದ್ಧಿ ಸಂಬಂಧ ತಮ್ಮದೇ ಪಕ್ಷದ ನೇತೃತ್ವದ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. 
 
ಅಖಿಲೇಶ್ ಆಡಳಿತದ ಬಗ್ಗೆ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಸ್ವತಃ ಅವರ ತಂದೆ ಕೂಡ ಪುತ್ರನ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
 
"ರಾಜ್ಯದಲ್ಲಿ ಸರಕಾರ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಆದರೆ ಅನುಷ್ಠಾನ ಮಾತ್ರ ಮಂದಗತಿಯಲ್ಲಿದೆ. ಹಲವು ಯೋಜನೆಗಳಿಗಳಿಗೆ ಶಿಲಾನ್ಯಾಸ ಮಾಡುತ್ತೀರಾ. ಆದರೆ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡುತ್ತೀರಾ.ಪೂರ್ಣಗೊಳಿಸಿದರೂ ಅವು ಉದ್ಘಾಟನಾ ಭಾಗ್ಯವನ್ನು ಕಾಣುತ್ತಿಲ್ಲ.ಇನ್ನು ಮುಂದೆ ಯೋಜನೆಗಳ ಉದ್ಘಾಟನಾ ದಿನಾಂಕವನ್ನು ನಿಗದಿ ಮಾಡಿ ಶಂಕು ಸ್ಥಾಪನೆಗೆ ಮುಂದಾಗಿ" ಎಂದು ಅವರು ತಮ್ಮ ಮಗನ ಕಿವಿ ಹಿಂಡಿದ್ದಾರೆ.

ವೆಬ್ದುನಿಯಾವನ್ನು ಓದಿ