ಜುಹು ಸಮುದ್ರತೀರದಲ್ಲಿ ದೈತ್ಯ ತಿಮಿಂಗಲ

ಶುಕ್ರವಾರ, 29 ಜನವರಿ 2016 (12:23 IST)
ಪಶ್ಚಿಮ ಕರಾವಳಿ ಸಮುದ್ರತೀರದಲ್ಲಿ ಮೃತ ಡಾಲ್ಫಿನ್ ಮತ್ತು ತಿಮಿಂಗಲಗಳು ಬಂದು ಬೀಳುತ್ತಿರುವುದು ಮುಂದುವರೆದಿದ್ದು, ನಿನ್ನೆ ರಾತ್ರಿ  ದೈತ್ಯ ಗಾತ್ರದ ಮೃತ ತಿಮಿಂಗಲವೊಂದು ಮುಂಬೈನ ಜುಹು ಸಮುದ್ರತೀರದಲ್ಲಿ ಪತ್ತೆಯಾಗಿದೆ. 

 
ನಿನ್ನೆ ರಾತ್ರಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಈ ದೈತ್ಯಾಕಾರದ ತಿಮಿಂಗಿಲ ದಡಕ್ಕೆ ಬಂದು ಬಿದ್ದಿದೆ ಎಂದು ಹೇಳಲಾಗಿದ್ದು, ರಾತ್ರಿ 9 ಗಂಟೆ ಸುಮಾರಿಗೆ ಜಾಗಿಂಗ್‌ಗೆ ಬಂದಿದ್ದ ಸಾರ್ವಜನಿಕರು ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಈ ಬೃಹತ್  ತಿಮಿಂಗಿಲ ಸುಮಾರು 35 ರಿಂದ 40 ಅಡಿ ಉದ್ದವಿದ್ದು, ಮೂರರಿಂದ ನಾಲ್ಕು ಟನ್ ಭಾರವಿದೆ.
 
ಈ ತಿಮಿಂಗಿಲ ಒಂದರಿಂದ ಎರಡು ದಿನಗಳ ಹಿಂದೆಯೇ ಮೃತಪಟ್ಟಿರುವುದು ಪ್ರಾಥಮಿಕ ಪರೀಕ್ಷೆಯಿಂದ ಗೊತ್ತಾಗಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ಬಂದು ಬಿದ್ದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 
 
ಇದೇ ತಿಂಗಳ ಜನೇವರಿ 12 ರಂದು ತಮಿಳುನಾಡಿನ ತೂತುಕುಡಿ ಸಮುದ್ರತೀರದಲ್ಲಿ ಸುಮಾರು 80 ತಿಮಿಂಗಲಗಳು ಬಂದು ಬಿದ್ದಿದ್ದು ಅವುಗಳೆಲ್ಲವನ್ನು ಸಮುದ್ರಕ್ಕೆ ಬಿಡಲು ಹರಸಾಹಸ ಪಟ್ಟಿದ್ದರೂ ಸುಮಾರು 40 ತಿಮಿಂಗಲಗಳು ಸಾವನ್ನಪ್ಪಿದ್ದವು. 

ವೆಬ್ದುನಿಯಾವನ್ನು ಓದಿ