ಮುಂಬೈ: ಬಾಂಬ್ ಬೆದರಿಕೆ ಹಿನ್ನೆಲೆ, ಬಿಗಿ ಭದ್ರತೆ

ಮಂಗಳವಾರ, 29 ಸೆಪ್ಟಂಬರ್ 2015 (13:24 IST)
ಮುಂಬೈನ ವಿಮಾನ ನಿಲ್ದಾಣ ಹಾಗೂ ವಾಣಿಜ್ಯ ನಗರದ ಪ್ರತಿಷ್ಠಿತ ತಾಜ್ ಹೊಟೇಲ್‌ಗೆ ಸೋಮವಾರ ರಾತ್ರಿ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.

ನಗರದ ವಿಮಾನ ನಿಲ್ದಾಣಗಳಲ್ಲಿ ಹಾಗೂ ತಾಜ್ ಹೊಟೇಲ್‌ನಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಸೋಮವಾರ ರಾತ್ರಿ ನಿಲ್ದಾಣದ ವ್ಯವಸ್ಥಾಪಕರಿಗೆ ಅಪರಿಚಿತ  ಬೆದರಿಕೆ ಕರೆಯೊಂದು ಬಂದಿತ್ತು. ವಾಹನಗಳಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿ ನಗರದ ಮೂರು ಕಡೆ ಸ್ಫೋಟಿಸುವುದಾಗಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ತಿಳಿಸಿದ್ದ. ಇದರಿಂದ ವಿಮಾನ ನಿಲ್ದಾಣ ಮತ್ತು ತಾಜ್‌‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪರಿಶೀಲನೆ ನಡೆಸಲಾಗಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದು ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ತಾಜ್ ಹೊಟೆಲ್ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ
 
ಮುಂಬೈನ 7/11ರ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಅಪರಾಧಿಗಳಿಗೆ ಬುಧವಾರ ಶಿಕ್ಷೆಯಾಗುವುದರಿಂದ ಇದಕ್ಕೆ ಪ್ರತೀಕಾರವಾಗಿ ಈ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. 
 
2008ಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯಲ್ಲಿ ತಾಜ್ ಹೊಟೆಲ್ ಪ್ರಮುಖ ಗುರಿಯಾಗಿತ್ತು. ಆ ಸಂದರ್ಭದಲ್ಲಿ 166 ಜನರು ದುರ್ಮರಣವನ್ನಪ್ಪಿದ್ದರು. 

ವೆಬ್ದುನಿಯಾವನ್ನು ಓದಿ