ಕುಡಿದ ಮತ್ತಿನಲ್ಲಿ ಡ್ರೈವಿಂಗ್; ತಡೆದು ನಿಲ್ಲಿಸಿದ ಪೊಲೀಸ್‌ನ ಬೆರಳು ಕಚ್ಚಿ ತುಂಡರಿಸಿದ

ಮಂಗಳವಾರ, 27 ಜನವರಿ 2015 (16:58 IST)
ಕುಡಿದು ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಮ್‌ಬಿಎ ವಿದ್ಯಾರ್ಥಿಯೊಬ್ಬ ತಡೆದು ನಿಲ್ಲಿಸಿದ ಪೊಲೀಸ್‌ನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೇ, ಸಹೋದ್ಯೋಗಿಯ ಸಹಾಯಕ್ಕೆ ಬಂದ ಇನ್ನೊಬ್ಬ ಪೊಲೀಸ್‌ನ ಕೈ ಬೆರಳನ್ನು ಕಚ್ಚಿ ತುಂಡರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. 
ಸತತ ಮೂರು ಗಂಟೆಗಳ ಹುಡುಕಾಟದ ನಂತರ ಕಚ್ಚಿ ತುಂಡು ಮಾಡಿ ಎಸೆದಿದ್ದ ಕಿರು ಬೆರಳ ತುಂಡು ಪೊಲೀಸರಿಗೆ ಸಿಕ್ಕಿತು. ಆದರೆ ಅದನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. 
 
ರವಿವಾರ ರಾತ್ರಿ 1 ಗಂಟೆ ಸುಮಾರಿಗೆ 5 ಜನ ಪೊಲೀಸ ಪೇದೆಗಳ ಗುಂಪು ಬೊರಿವಲಿಯ ಸುಮರ್ ನಗರದ ರಾಜೇಂದ್ರನಗರ ಸೇತುವೆ ಬಳಿ ತಪಾಸಣೆಗೆ ನಿಂತಿತ್ತು. 2.50 ರ ಸುಮಾರಿಗೆ ಇಬ್ಬರು ಯುವಕರು ವೇಗ ಮತ್ತು ನಿರ್ಲಕ್ಷತನದಿಂದ ಎಕ್ಟಿವಾವನ್ನು ಚಲಾಯಿಸಿಕೊಂಡು ಬಂದರು. ಯುವಕರನ್ನು ತಡೆದು ನಿಲ್ಲಿಸಿದ ಪೊಲೀಸರಿಗೆ ಅವರೀರ್ವರು ಕಂಠಪೂರ್ತಿ ಕುಡಿದಿರುವುದು ತಿಳಿದು ಬಂದಿದೆ. 
 
ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಯುವಕರಲ್ಲೊಬ್ಬ ಮೊದಲು ಒಬ್ಬ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಇನ್ನೊಬ್ಬನ ಬೆರಳು ಕಚ್ಚಿ ತುಂಡರಿಸಿದ್ದಾನೆ ಎಂದು ವರದಿಯಾಗಿದೆ. 
 
ಇಬ್ಬರು ಆರೋಪಿಗಳನ್ನು ಅಶ್ವಿನ್ ಕುಮಾರ್ ರಾಮನಾಥ್ ಸಿಂಗ್( 29) ಮತ್ತು ಅಭಿಷೇಕ್ ಜಿತೇಂದ್ರ ಪಾಂಡೆ( 27) ಎಂದು ಗುರುತಿಸಲಾಗಿದೆ. 

ವೆಬ್ದುನಿಯಾವನ್ನು ಓದಿ