ತನ್ನ ಸ್ವಂತ ಹೆಣ್ಣು ಮಕ್ಕಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಘಟನೆ ಮೆಘ್ವಾಡಿಯಲ್ಲಿ ನಡೆದಿದೆ. ಕಳೆದ 9 ತಿಂಗಳಿಂದ ಈ ದುಷ್ಕೃತ್ಯ ನಡೆಯುತ್ತಿದ್ದು, ಆರೋಪಿಯ ಇಬ್ಬರು ಸ್ನೇಹಿತರು ಕೂಡ ಈ ಕುಕೃತ್ಯದಲ್ಲಿ ಪಾಲುದಾರರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ನಿ, ಪೀಡಿತರ ತಾಯಿ ಕಳೆದ 10 ತಿಂಗಳ ಹಿಂದೆ ಮರಣವನ್ನಪ್ಪಿದ್ದಳು.
ಪತ್ನಿಯ ಮರಣಾ ನಂತರ ಆತ ತನ್ನ ಮಕ್ಕಳ ಮೇಲೆ ಚಪಲವನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ. ಜೋಗೇಶ್ವರಿಯಲ್ಲಿರುವ ತನ್ನ ಮನೆಯಲ್ಲಿ 16, 18 ಮತ್ತು 19 ವರ್ಷದ ತನ್ನ ಹೆಣ್ಣು ಮಕ್ಕಳ ಮೇಲಾತ ಲೈಂಗಿಕ ಶೋಷಣೆ ನಡೆಸುತ್ತಿದ್ದ ಮತ್ತು ಈ ಕುರಿತು ಯಾರ ಬಳಿಯಾದರೂ ಬಾಯ್ಬಿಟ್ಟರೆ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ.
ಯುವತಿಯರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಪೋಲೀಸರು ಬಂಧಿಸಿದ್ದಾರೆ.
ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಆತನ ಸ್ನೇಹಿತರ ಮೇಲೂ ಪ್ರಕರಣವನ್ನು ದಾಖಲಿಸಲಾಗಿದ್ದು, ಸದ್ಯದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.