11 ವರ್ಷದ ಬಾಲೆಯ ಮೇಲೆ ಶಾಲಾ ಶೌಚಾಲಯದಲ್ಲಿ 2 ತಿಂಗಳುಗಳಿಂದ ಅತ್ಯಾಚಾರ

ಶುಕ್ರವಾರ, 27 ಮಾರ್ಚ್ 2015 (17:32 IST)
24 ವರ್ಷದ ಝಾಡಮಾಲಿಯೊಬ್ಬ 11 ವರ್ಷದ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ 2 ತಿಂಗಳುಗಳ ಕಾಲ ಅತ್ಯಾಚಾರ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ. ತನಗೆ ಬೆದರಿಕೆ ಒಡ್ಡುತ್ತಿದ್ದ ಆತ ಶಾಲೆಯ ಶೌಚಾಲಯದಲ್ಲಿ ಅತ್ಯಾಚಾರ ಎಸಗುತ್ತಿದ್ದ ಎಂದು ಪೀಡಿತೆ ಆರೋಪಿಸಿದ್ದಾಳೆ. 

ಬುಧವಾರ ರಾತ್ರಿ ಬಾಲಕಿ ತನ್ನ ಗುಪ್ತಾಂಗಗಳಲ್ಲಿ ನೋವಾಗುತ್ತಿದೆ ಮತ್ತು ರಕ್ತಸ್ರಾವವಾಗುತ್ತಿದೆ ಎಂದು ತನ್ನ ಚಿಕ್ಕಮ್ಮನಲ್ಲಿ ದೂರಿದ್ದಾಳೆ ಆಗ ಘಟನೆ ಬೆಳಕಿಗೆ ಬಂದಿದೆ. ಅನಾಥಳಾಗಿರುವ ಬಾಲಕಿ ತನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದಾಳೆ. 
 
ಘಟನೆ ಬಹಿರಂಗವಾಗುತ್ತಿದ್ದಂತೆ ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಸೇರಿಕೊಂಡು ಜೆಜೆ ಮಾರ್ಗ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
 
ಪೀಡಿತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ವೆಬ್ದುನಿಯಾವನ್ನು ಓದಿ