ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಯಲ್ಲಿ ಯುವತಿಯ ಹಂಗಾಮಾ (ವಿಡಿಯೋ)

ಮಂಗಳವಾರ, 28 ಜೂನ್ 2016 (15:26 IST)
ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. 

ಈ ತಿಂಗಳ ಆರಂಭದಲ್ಲಿ ಘಟನೆ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. ಯುವತಿ  ತನ್ನಿಬ್ಬರು ಪುರುಷ ಸ್ನೇಹಿತರೊಂದಿಗೆ ಅತಿ ವೇಗದಿಂದ ಕಾರ್ ಚಲಾಯಿಸಿ ಡಿವೈಡರ್ ಒಂದಕ್ಕೆ ಡಿಕ್ಕಿ ಹೊಡೆದಿದ್ದಳು. ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. 
 
ಕಾರ್ ಡೋರ್ ಓಪನ್ ಮಾಡುವಂತೆ ಪೊಲೀಸರು ತಿಳಿಸಿದಾಗ ಚಾಲಕನ ಸೀಟಿನಲ್ಲಿ ಕುಳಿತಿದ್ದ 21 ವರ್ಷದ ಯುವತಿ ಅವರ ಮೇಲೆ ಎಂಜಲು ತೂರಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲ ಸಹಾಯಕ ಪೊಲೀಸ್ ಇನ್ಸಪೆಕ್ಟರ್‌ನ್ನು ಕಚ್ಚಲೆತ್ನಿಸಿದ್ದಾಳೆ. ಹರಸಾಹಸ ಪಟ್ಟು ಮೂವರನ್ನು ಪೊಲೀಸರು ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ನಡೆದದ್ದಂತೂ ಹೈ ವೋಲ್ಟೇಜ್ ಡ್ರಾಮಾ. 

ಆ ಯುವತಿ ಪೊಲೀಸರಿಗೆ ಒದೆ ನೀಡುತ್ತಿರುವುದು, ಕಪಾಳಕ್ಕೆ ಹೊಡೆಯುತ್ತಿರುವುದು, ಅವಾಚ್ಛ ಶಬ್ಧಗಳಿಂದ ಬೈಯ್ಯುತ್ತಿರುವುದು ಠಾಣೆಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 
 
ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. 

 ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಯಲ್ಲಿ ಯುವತಿಯ ಹಂಗಾಮಾ (ವಿಡಿಯೋ)
ಕೃಪೆ: ZEE News

 

ವೆಬ್ದುನಿಯಾವನ್ನು ಓದಿ