ಸಹಪಾಠಿ ಮೇಲೆ ಬಸ್, ಕಾರ್‌ನಲ್ಲಿ ಲೈಂಗಿಕ ದೌರ್ಜನ್ಯ

ಸೋಮವಾರ, 19 ಡಿಸೆಂಬರ್ 2016 (10:47 IST)
14 ವರ್ಷದ ಖಾಸಗಿ ಶಾಲೆ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಕೆಯ ಇಬ್ಬರು ಸ್ನೇಹಿತರು ಮತ್ತು ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಶಾಲಾ ಬಸ್ ಮಾಲೀಕನನ್ನು ಥಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. 
ಆರೋಪಿ ಬಾಲಕರು ಕೂಡ ಅಪ್ರಾಪ್ತರಾಗಿದ್ದು ಅವರನ್ನು ರಿಮ್ಯಾಂಡ್ ಹೋಮ್‌ಗೆ ಸೇರಿಸಲಾಗಿದೆ. ಐಪಿಸಿ ವಿಭಾಗ 363( ಅಪಹರಣ) ಮತ್ತು 354ರ  ಮತ್ತು ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. 
 
ಡಿಸೆಂಬರ್ 15 ರಂದು, ಈ ಘಟನೆ ನಡೆದಿದ್ದು ಪರೀಕ್ಷೆ ಮುಗಿಸಿದ ಬಾಲಕಿ ಎಲ್ಲರಿಗಿಂತ ಮೊದಲು ಹೋಗಿ ಶಾಲಾ ಆವರಣದಲ್ಲಿ ನಿಂತಿದ್ದ  ಬಸ್‌ನಲ್ಲಿ ಕುಳಿತಿದ್ದಾಳೆ. ಆ ಸಮಯದಲ್ಲಿ ಮತ್ತೊಬ್ಬ ಬಾಲಕಿ ಕೂಡ ಆ ಬಸ್‌ನಲ್ಲಿದ್ದಳು. ಆ ಸಮಯದಲ್ಲಿ ಅಲ್ಲಿಗೆ ಬಂದ ಆಕೆಯ ಇಬ್ಬರು ಸಹಪಾಠಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. 
 
ಇದನ್ನು ನೋಡಿದ ಮತ್ತೊಬ್ಬ ಬಾಲಕಿ ಬೆದರಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ. 
 
ಬಳಿಕ ಇಬ್ಬರು ಆರೋಪಿಗಳು ಬಾಲಕಿಯನ್ನು ಕಾರ್ ಒಳಗೆ ಎಳೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಶಾಲಾ ಬಸ್ ಮಾಲೀಕ ದರ್ಶನ್ ಭೋಕ್ರೆ (30) ಕೂಡ ಆ ಕಾರ್‌ನಲ್ಲಿದ್ದ.
 
ಸ್ವಲ್ಪ ದೂರ ಕಾರ್ ಚಲಾಯಿಸಿಕೊಂಡು ಹೋದ ಬಾಲಕರು ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗಿದ್ದಾರೆ. ಬಳಿಕ ದರ್ಶನ್ ಕಾರ್ ಚಲಾಯಿಸಿಕೊಂಡು ಹೋಗಿ ಬಾಲಕರಿಬ್ಬರನ್ನು ಪೆಟ್ರೋಲ್ ಪಂಪ್ ಒಂದರ ಬಳಿ ಬಿಟ್ಟಿದ್ದಾನೆ. ತಕ್ಷಣ ಬಾಲಕರು ಅಲ್ಲಿಂದ ಪರಾರಿಯಾಗಿದ್ದಾರೆ. 
 
ಪೀಡಿತ ಬಾಲಕಿ ಯಾರ ಬಳಿ ಕೂಡ ನಡೆದ ಕೃತ್ಯವನ್ನು ತಿಳಿಸಿಲ್ಲ. ಆದರೆ ಆಕೆಯ ಮೇಲೆ ದೌರ್ಜನ್ಯ ನಡೆಯುವಾಗ ಬಸ್‌ನಲ್ಲಿದ್ದ ಬಾಲಕಿ ಎಲ್ಲವನ್ನು ಶಿಕ್ಷಕಿಗೆ ತಿಳಿಸಿದ್ದಾಳೆ. ಹೀಗಾಗಿ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ